spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಪಾರ್ಟ್ ಮೆಂಟ್ ನಲ್ಲಿನ ಶ್ರೀಮಂತಿಕೆ ಬಿಟ್ಟು ಈಕೆ ಕಟ್ಟಿಕೊಂಡಳು ಮಣ್ಣಿನ ಮನೆ! ಈಕೆಯ ಪರಿಸರ ಕಾಳಜಿಗೆ ನಮ್ಮ ಸಲಾಮ್

- Advertisement -Nitte
  • ಹಿತೈಷಿ

ಚಂದದ ಮನೆ ಕಟ್ಟಿ ನೂರಾರು ಜನರನ್ನು ಮನೆಯ ಗೃಹ ಪ್ರವೇಶಕ್ಕೆ ಕರೆದು, ಊಟ ಹಾಕಿಸೋ ಆಸೆ ಯಾರಿಗಿಲ್ಲ ಹೇಳಿ. ಮನೆಯ ಬೀದಿಯಲ್ಲಿ ಯಾರೇ ಮನೆ ಕಟ್ಟುತ್ತಿದ್ದರೂ ನಾವು ಯಾವಾಗ ಇಷ್ಟು ಸುಂದರ, ಲಕ್ಷುರಿ ಮನೆ ಕಟ್ತೀವಿ ಅಂತ ಅನ್ನಿಸೋದು ನಿಜಾನೇ ಅಲ್ವಾ? ಆದರೆ ಈ ದುಬಾರಿ ಹಾಗೂ ಆಡಂಬರದ ಮನೆಗಳಿಗಿಂತ ಪರಿಸರಕ್ಕೆ ಹಾನಿ ಮಾಡದೆ ಎಕೋ ಫ್ರೆಂಡ್ಲಿ ಮನೆಗಳಲ್ಲಿ ಬದುಕೋದು ಉತ್ತಮ ಎಂದು ಯಾವತ್ತಾದರೂ ಅನ್ನಿಸಿದ್ಯಾ?
ಹಾಗಿದ್ದರೆ ನಿಮ್ಮ ಆಲೋಚನೆಗಳಿಗೆ ಈ ಕಥಾ ನಾಯಕಿ ಮಾದರಿಯಾಕ್ತಾರೆ ನೋಡಿ. ಇವರ ಹೆಸರು ವೀಣಾ ಲಾಲ್. ಮೂಲತಃ ಫರೀದಾಬಾದ್ ನವರು.

Eco-friendly mud home in Faridabad.ಅಪಾರ್ಟ್ ಮೆಂಟ್ ಒಂದರಲ್ಲಿ ವಾಸ ಮಾಡುತ್ತಾ ಎನ್ ಜಿಒ ನಡೆಸುತ್ತಿದ್ದ ಇವರಿಗೆ ಕಾಂಕ್ರೀಟ್ ಮನೆಯಲ್ಲಿ ಜೀವನ ನಡೆಸೋದು ಕಿಂಚಿತ್ತು ಇಷ್ಟ ಇರಲಿಲ್ಲ. ಅದಕ್ಕೆ ಅವರಿದ್ದ ಬಾಡಿಗೆ ಮನೆ ಬಿಟ್ಟು ಅಲ್ಲೇ ಹತ್ತಿರಲ್ಲಿ ಒಂದು ಖಾಲಿ ಜಾಗ ಖರೀದಿಸಿ, ‘ಎಕೋ ಫ್ರೆಂಡ್ಲಿ ಮಣ್ಣಿನ ಮನೆ’ ನಿರ್ಮಿಸಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.
ಮಣ್ಣಿನ ಮನೆ ಭಾರತಕ್ಕೆ ಹೊಸತೇನಲ್ಲ. ಪರಿಸರಕ್ಕೆ ತೊಂದರೆಯಾಗದೆ ಕಡಿಮೆ ಖರ್ಚಿನಲ್ಲಿ ನಿರ್ಮಾಣ ಮಾಡುವ ಇವುಗಳಿಗೆ ಈಗಲೂ ಸಖತ್ ಬೇಡಿಕೆಗಳಿವೆ.

ಯಾಕೆ ಗೊತ್ತಾ?
ಪ್ರಾಣಿ ಪಕ್ಷಿ, ಗಿಡಗಳಿಗೆ, ಭೂಮಿಗೆ ಯಾವುದೇ ರೀತಿಯ ಸಮಸ್ಯೆಯಾದಗಂತೆ ನಿರ್ಮಾಣ ಮಾಡೋದೆ ಒಂದು ವಿಶೇಷ. ಇಲ್ಲಿ ಬೆಳಕು, ಗಾಳಿ ಯಾವುದೇ ರೀತಿಯ ತೊಂದರೆಯಾಗೋದಿಲ್ಲ. ಇದಕ್ಕೆ ಈಗಲೂ ಕೂಡ ಮನೆಗಳಿಗೆ ತುಂಬಾನೆ ಬೇಡಿಕೆ ಇದೆ.
ಮೂರು ವರ್ಷಗಳ ಹಿಂದೆ ಕೂಡಿಟ್ಟ ಹಣಗಳನ್ನೆಲ್ಲಾ ಸಂಗ್ರಹಿಸಿ 1800 ಚದುರದ ಜಾಗದಲ್ಲಿ ಎಕೋ ಫ್ರೆಂಡ್ಲಿ ಮನೆ ಕಟ್ಟಿಸೋಕೆ ರೆಡಿಯಾದ್ರು. ಮುಂಬೈ ಮೂಲದ ವಾಸ್ತುಶಿಲ್ಪಿ ಅಮೊಲ್ ಮಾನೆಕಾರ್ ರಿಂದ ಈ ಡಿಫರೆಂಟ್ ಆದ ಎಕೋ ಮನೆ ನಿರ್ಮಿಸಿಕೊಂಡಿದ್ದಾರೆ.

Eco-friendly house with mud-plastered walls

ಮನೆ ವಿನ್ಯಾಸ ಹೇಗೆ?
ಈ ಮನೆ ಶೃಂಗರಿಸಲು ಯಾವುದೇ ಪರಿಸರ ಹಾನಿಯಾಗುವಂತಹ ಲೈಟ್ ಗಳು, ಟೈಲ್ಸ್ ಗಳು, ಸಿಮೆಂಟ್ ಗಳ ಬಳಕೆ ಕೂಡ ಇಲ್ಲ. ಮನೆಗೆ ಸೂರ್ಯನ ಕಿರಣಗಳು ಬರುವ ಹಾಗೆ ನಿರ್ಮಿಸಲಾಗಿದೆ. ಇದರಿಂದ ಮನೆಯಲ್ಲಿ ಗಾಳಿ, ಬೆಳಕು ಸಂಪೂರ್ಣವಾಗಿ ಸಿಗಲಿದೆ.
ಮತ್ತೊಂದು ವಿಶೇಷ ಅಂದ್ರೆ ಮನೆ ನಿರ್ಮಿಸುವ ವೇಳೆ ಕೆಲವು ರೆಡ್ ಆಕ್ಸೈಡ್ ಕಲ್ಲುಗಳು, ಸುತ್ತಮುತ್ತಲೂ ಸಿಕ್ಕಿದ ಕಲ್ಲುಗಳಿಂದ ಮನೆಯ ಮೇಲ್ಚಾವಣಿ ಕಟ್ಟಿದ್ದಾರೆ.ಈ ಮನೆಯ ಅಡುಗೆ ಮನೆ ಶೆಲ್ಫ್, ಕಿಟಕಿ ಹಾಗೂ ಮನೆ ಬಾಗಿಲನ್ನು ವುಡ್ ನಿಂದ ಮಾಡಲಾಗಿದೆ. ಈ ಮನೆಯ ಟಾಯ್ಲೆಟ್ ನಲ್ಲಿ ಫ್ಲಶ್ ಕೂಡ ಇಲ್ಲ. ಎಲ್ಲವೂ ಎಕೋ ಫ್ರೆಂಡ್ಲಿ. ಮನೆಯ ಹೊರ ಭಾಗದಲ್ಲಿ ಪಕ್ಷಿಗಳ ರಕ್ಷಣೆಗಾಗಿ ಸ್ಥಳ ನಿರ್ಮಿಸಿದ್ದಾರೆ ವೀಣಾ.

ಗಾರ್ಡೆನಿಂಗ್
ದಿನನಿತ್ಯಕ್ಕೆ ಬೇಕಾಗಿರುವ ತರಕಾರಿಗಳನ್ನು ಸ್ವತಃ ವೀಣಾ ಅವರೇ ಮನೆಯಲ್ಲಿ ಬೆಳೆಯುತ್ತಾರೆ. ಮಲ ಮೂತ್ರಗಳನ್ನೂ ಕೂಡ ಗೊಬ್ಬರಕ್ಕೆ ಸೇರಿಸುತ್ತುದ್ದು, ತಾವು ಬಳಸೋ ಸೋಪು ಕೂಡ ಎಕೋ ಫ್ರೆಂಡ್ಲಿಯಂತೆ.

Open bathing space in Veena's house ಎಷ್ಟೆಲ್ಲಾ ಲಾಭ ಗೊತ್ತಾ?
ಈ ರೀತಿ ಎಕೋ ಫ್ರೆಂಡ್ಲಿ ಮನೆಯಲ್ಲಿರುವುದರಿಂದ ಖರ್ಚು ಕಡಿಮೆಯಾಗುತ್ತೆ. ಮನೆಯಲ್ಲಿ ಮಿತಿಯಾದ ನೀರಿನ ಬಳಕೆ, ತಾವೇ ಬೆಳೆದ ತರಕಾರಿ, ಸೋಲಾರ್ ಕುಕ್ಕರ್ ಬಳಕೆ ಮಾಡುವುದರಿಂದ ವಿದ್ಯುತ್ ಬಿಲ್ 10 ಸಾವಿರದಿಂದ 3 ಸಾವಿರಕ್ಕೆ ಇಳಿದಿದೆ ಎನ್ನುತ್ತಾರೆ ವೀಣಾ.

ಈ ರೀತಿ ಖರ್ಚು ಕಡಿಮೆ ಮಾಡಿಕೊಂಡು, ಖುಷಿ, ನೆಮ್ಮದಿ ಹೆಚ್ಚಿಸಿಕೊಳ್ಳಬೇಕು ಅನ್ನೋದು ನಮ್ಮೆಲ್ಲರ ಆಸೆ. ಅಂತೆಯೇ ಭೂಮಿತಾಯಿಗೆ ಮಾನವನಿಂದ ನೋವಾಗದಂತೆ ಎಕೋ ಫ್ರೆಂಡ್ಲಿ ಮನೆಯಲ್ಲಿ ಬದುಕೋದು ಒಂದು ತೃಪ್ತಿದಾಯಕ ಜೀವನ ಅಲ್ವಾ?

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss