Tuesday, August 16, 2022

Latest Posts

ಏನೂ ಸಿಗದೇ ಕಮೋಡ್‌ನಲ್ಲೇ ಜ್ಯೂಸ್ ತಯಾರಿಸಿದ ಯುವತಿ.. ಸ್ನೇಹಿತರು ಈ ಜ್ಯೂಸ್ ಕುಡಿದರು ಅಂದ್ರೆ ನಂಬ್ತೀರಾ?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜ್ಯೂಸ್‌ನ್ನು ಯಾವುದರಿಂದೆಲ್ಲ ಮಾಡಬಹುದು? ಸಾಮಾನ್ಯವಾಗಿ ಮಿಕ್ಸರ್‌ನಲ್ಲಿ ಮಾಡುತ್ತಾರೆ. ಅದಿಲ್ಲ ಅಂದೋರು ಕೈಯಲ್ಲಿ ಹಿಂಡಿ ಮಾಡುತ್ತಾರೆ. ಆದರೆ ಇಲ್ಲೊಬ್ಬರು ವಿದೇಶಿ ಮಹಿಳೆ ಕಮೋಡ್‌ನಲ್ಲಿ ಜ್ಯೂಸ್ ಮಾಡಿ ತನ್ನ ಸ್ನೇಹಿತರಿಗೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು,5.7 ಮಿಲಿಯನ್‌ಗೂ ಹೆಚ್ಚು ಜನ ವಿಡಿಯೋ ವೀಕ್ಷಿಸಿದ್ದಾರೆ.


ಮೊದಲಿಗೆ ಕಮೋಡ್ ಬ್ಲಾಕ್ ಮಾಡಿ, ಐಸ್ ಸುರಿಯುತ್ತಾಳೆ. ನಂತರ ಇದಕ್ಕೆ ವಿಧವಾದ ಐಸ್‌ಕ್ರೀಂ ಹಾಕುತ್ತಾಳೆ. ನಂತರ ಜೆಲ್ಲಿ, ಫ್ರೂಟ್ ಜ್ಯೂಸ್ ಎಲ್ಲವನ್ನು ಹಾಕಿ ಮಿಕ್ಸ್ ಮಾಡುತ್ತಾಳೆ. ವಾಟರ್ ಸ್ಟೋರೇಜ್ ಏರಿಯಾದಲ್ಲಿ ಜೆಲ್ಲಿ ಹಾಗೂ ಫ್ರೂಟ್ ಜ್ಯೂಸ್ ಸುರಿಯುತ್ತಾರೆ. ನಂತರ ಮೆಲ್ಲಗೆ ಫ್ಲಶ್ ಮಾಡಿ ಸೌಟ್‌ನಲ್ಲಿ ಜ್ಯೂಸ್ ಮಿಕ್ಸ್ ಮಾಡುತ್ತಾಳೆ. ಇಲ್ಲಿಗೆ ಟಾಯ್ಲೆಟ್‌ನಲ್ಲಿ ತಯಾರಿಸಿದ ಜ್ಯೂಸ್ ರೆಡಿ. ಇದನ್ನು ತನ್ನ ಸ್ನೇಹಿತರಿಗೆ ಕುಡಿಯಲು ನೀಡುತ್ತಾಳೆ. ಈ ವಿಡಿಯೋ ವೈರಲ್ ಆಗಿದೆ.ಕೆಲವರು ವಾವ್ ಎಂದರೆ ಹಲವರು ವ್ಯಾ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss