ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ವರ್ಷದ ಕಡೆಯ ಸೂಪರ್‌ಮೂನ್‌ಗೆ ‘ಸ್ಟ್ರಾಬೆರಿ ಮೂನ್’ ಎಂದು ನಾಮಕರಣ: ಇದರರ್ಥ ಏನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜೂನ್ 10 ರಂದು ಘಟಿಸಿದ ಸೂರ್ಯಗ್ರಹಣವನ್ನು ‘ಬೆಂಕಿಯ ಉಂಗುರ’ ಎಂದು ಬಣ್ಣಿಸಲಾಗಿತ್ತು, ಅದೇ ರೀತಿ 2021 ರ ಕಡೆಯ ಸೂಪರ್‌ಮೂನ್ ಜೂ.24 ರಂದು ಸಂಭವಿಸಲಿದ್ದು, ಅದನ್ನು ‘ಸ್ಟ್ರಾಬೆರಿ ಮೂನ್’ ಎಂದು ಕರೆಯಲಾಗಿದೆ. ಚಂದ್ರ ತನ್ನ ಕಕ್ಷೆಯಲ್ಲೇ ಸುತ್ತುತ್ತಾ ಭೂಮಿಗೆ ಅತ್ಯಂತ ಸಮೀಪಕ್ಕೆ ಬಂದುಹೋಗುವ ಪ್ರಕ್ರಿಯೆಯನ್ನು ಸೂಪರ್‌ಮೂನ್ ಎನ್ನಲಾಗುತ್ತದೆ.
ಭೂಮಿಯ ಸಮೀಪಕ್ಕೆ ಬರುವುದರಿಂದ ದೊಡ್ಡದಾಗಿ ಕಾಣುವ ಚಂದ್ರನನ್ನು ಈ ಬಾರಿ ಸ್ಟ್ರಾಬೆರಿ ಸೂಪರ್‌ಮೂನ್ ಎನ್ನಲಾಗುತ್ತದೆ. ಅಮೆರಿಕದ ಉತ್ತರ ಭಾಗದಲ್ಲಿ ಜೂನ್ ಸಮಯದಲ್ಲಿ ಸ್ಟ್ರಾಬೆರಿ ಬೆಳೆ ಬೆಳೆಯಲಾಗುತ್ತದೆ. ಇದೇ ಕಾರಣಕ್ಕಾಗಿ ಜೂನ್‌ನಲ್ಲಿ ಬರುವ ಸೂಪರ್‌ಮೂನ್‌ಗೆ ಸ್ಟ್ರಾಬೆರಿ ಎಂದು ಹೆಸರಿಡಲಾಗಿದೆ. ಆದರೆ ಮೂನ್‌ನ ಬಣ್ಣ ಸ್ಟ್ರಾಬೆರಿ ಪಿಂಕ್ ಕಾಣುವುದಿಲ್ಲ. ಒಂದೊಂದು ಪ್ರದೇಶದಲ್ಲಿ ಅವರ ಕಾರಣಗಳಿಗೆ ಚಂದ್ರನಿಗೆ ಒಂದೊಂದು ಹೆಸರಿಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss