Saturday, December 9, 2023

Latest Posts

ನಾನು ನಂಬಿದವರೇ ನನ್ನ ಕೈಬಿಟ್ಟಿದ್ದಾರೆ: ಬಿ.ಆರ್. ಪಾಟೀಲ್ ಅಸಮಾಧಾನ

ಹೊಸದಿಗಂತ ವರದಿ ಕಲಬುರಗಿ:

ನಾನೊಬ್ಬ ಹುಟ್ಟು ಹೋರಾಟಗಾರನಾಗಿದ್ದು, ಜನರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ, ಅವರಿಗೆ ನ್ಯಾಯ ಕೊಡಿಸುವುದೊಂದೆ ನನ್ನ ಮುಖ್ಯ ಕಾಯ೯ವಾಗಿದೆ. ಹೀಗಾಗಿ ನಾನು ಯಾವತ್ತೂ ಸಚಿವ ಸ್ಥಾನದ ಹಿಂದೆ ಜೋತು ಬಿದ್ದವನಲ್ಲ. ಬಿಳೋದು ಇಲ್ಲ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸ್ಥಾನಕ್ಕಾಗಿ ನಾನು ಯಾರ ಬಳಿಯೂ ಭಿಕ್ಷೆ ಬೇಡಿಲ್ಲ. ಆದರೆ, ನಾನು ಯಾರನ್ನು ನಂಬಿದ್ದೆಯೋ ಅವರು ನನ್ನ ಕೈ ಬಿಟ್ಟಿದ್ದಾರೆ. ಹೀಗಾಗಿ ನಾನು ನಂಬಿ ಕೆಟ್ಟಿದ್ದೇನೆ ಎಂದು ಹೆಸರು ಹೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬೇಕಾಬಿಟ್ಟಿ ಸಾರಾಯಿ ವ್ಯಾಪಾರ ನಡೆದಿದೆ. ಅದರಿಂದ ಯುವಕರ ಭವಿಷ್ಯ ಹಾಳಾಗುತ್ತಿದೆ. ಅದರ ವಿರುದ್ಧ ಹೋರಾಟ ಮಾಡುತ್ತೇನೆ. ಕೋಮುಗಲಭೆ ಸೃಷ್ಟಿ ಮಾಡುವ ಶಕ್ತಿಗಳ ವಿರುದ್ಧ ಹೋರಾಟ ಮುಂದುವರೆಸುತ್ತೇನೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಗೆ ಪ್ರಿಯಾಂಕ್ ಖಗೆ೯ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಸಚಿವ ಸ್ಥಾನ ದೊರಕಿದ್ದು,ಸ್ವಾಗತಾರ್ಹ ವಿಷಯ. ಇಬ್ಬರಿಗೂ ಒಳ್ಳೆಯ ಕೆಲಸ ಮಾಡಿದ ಅನುಭವಿದೆ. ಮುಂದಿನ ದಿನಗಳಲ್ಲಿ ಸಹ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!