ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಪರಿಷ್ಕರಣಿಗೆ ಮುಂದಾಗಿದ್ದು, ಈ ಕುರಿತಾಗಿ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಎಪಿಎಲ್ ಕಾರ್ಡಿಗೆ ಸೇರಿಸುತ್ತೇವೆ. ಆದರೆ ಯಾವುದೇ ಕಾರ್ಡ್ ಗಳನ್ನು ರದ್ದು ಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಯಾವುದು ರದ್ದು ಮಾಡುತ್ತಿಲ್ಲ. ಸುಮ್ಮನೆ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ದಕ್ಷಿಣ ಭಾರತದಲ್ಲಿ ರಾಜ್ಯದಲ್ಲಿ 80 ಪರ್ಸೆಂಟ್ ಬಿಪಿಎಲ್ ಕಾರ್ಡ್ ದಾರರಿದ್ದಾರೆ ಕೆಲವರು ಬಿಪಿಎಲ್ ಗೆ ಅರ್ಹರಲ್ಲದವರು ಕೂಡ ಇದ್ದಾರೆ.ಅಂತವರನ್ನು ತೆಗೆದು ಎಪಿಎಲ್ ಗೆ ಹಾಕುತ್ತೇವೆ , ಆದರೆ ಯಾವುದೇ ಕಾರ್ಡ್ ರದ್ದು ಮಾಡುವುದಿಲ್ಲ. ಎಪಿಎಲ್ ಕಾರ್ಡ್ ದಾರರಿಗೂ ಬೇರೆ ಬೇರೆ ಸೌಲಭ್ಯಗಳು ಸಿಗಲಿವೆ. ಅನುಕೂಲಸ್ಥರು ತೆರಿಗೆ ಪಾವತಿಸುವವರನ್ನು ಎಪಿಎಲ್ ಕಾರ್ಡಿಗೆ ಸೇರಿಸುತ್ತೇವೆ ಎಂದರು.
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ 50% ಮೇಲೆ ಇಲ್ಲ ಆದರೆ ನಮ್ಮ ರಾಜ್ಯದಲ್ಲಿ ಮಾತ್ರ 80 ಪರ್ಸೆಂಟ್ ಬಿಪಿಎಲ್ ಕಾರ್ಡ್ದಾರರು ಇದ್ದಾರೆ. ಅವರನ್ನು ತೆಗೆಯುವ ಕೆಲಸ ಮಾಡುತಿದ್ದೇವೆ ಅಷ್ಟೇ. ರಾಜ್ಯದ 6.5 ಕೋಟಿ ಜನರಲ್ಲಿ 4.5 ಕೋಟಿ ಫಲಾನುಭವಿಗಳು ಇದ್ದಾರೆ. ಬಿಪಿಎಲ್ ಗೆ ಅರ್ಹರಲ್ಲದವರನ್ನು ಎಪಿಎಲ್ ಗೆ ಬದಲಾವಣೆ ಮಾಡುತಿದ್ದೇವೆ. ಇದು ಆದ ತಕ್ಷಣ ಬಿಪಿಎಲ್ ಕಾರ್ಡ್ ಸಿಗದವರಿಗೆ ಹೊಸ ಕಾರ್ಡ್ ನೀಡುತ್ತೇವೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.