ಹೊಸದಿಗಂತ ಆನ್ ಲೈನ್ ಡೆಸ್ಕ್:
ಇಂದು ಕನ್ನಡ ಚಿತ್ರರಂಗಕ್ಕೆ ಡಬಲ್ ಧಮಾಕ ಸಿಕ್ಕಿದ್ದು, ನವರಸ ನಾಯಕ ಜಗ್ಗೇಶ್ ಅವರ ತೋತಾಪುರಿ ಚಿತ್ರದ ಫಸ್ಟ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಜಗ್ಗೇಶ್ ರ ಮೊದಲ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಜಗ್ಗೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದು, ಆದರೆ ಇದೇ ದಿನದಂದು ತೋತಾಪುರಿ ಚಿತ್ರತಂಡದ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಈ ಚಿತ್ರವು ಸುರೇಶ್ ಆರ್ಟ್ಸ್ ಪ್ರೈ. ಲಿ’ ಬ್ಯಾನರ್ನಲ್ಲಿ ಕೆ. ಎ. ಸುರೇಶ್ ನಿರ್ಮಿಸುತ್ತಿರುವ ತೋತಾಪುರಿ ಸಿನಿಮಾಕ್ಕೆ ವಿಜಯ್ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.