ಹೊಸದಿಗಂತ ವರದಿ, ಹುಬ್ಬಳ್ಳಿ
ಮಸೀದಿ ಮೇಲಿನ ಧ್ವನಿವರ್ಧಕದಿಂದ ಉಂಟಾಗುವ ಶಬ್ಧ ಮಾಲಿನ್ಯ ತಡೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಶ್ರೀರಾಮ ಸೇನೆಯಿಂದ ಮೆ 9 ರಂದು ರಾಜ್ಯದ ಒಂದು ಸಾವಿರ ದೇವಸ್ಥಾನಗಳ ಮೇಲೆ ಬೆಳಗ್ಗೆ 5 ರಿಂದ 6 ಗಂಟೆಯವರೆಗೆ ಲೌಡ್ ಸ್ಪೀಕರ್ ನಲ್ಲಿ ಸುಪ್ರಭಾತ ಹೊಹೊಮ್ಮಿಸುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಧರ ಕುಲಕರ್ಣಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ವನಿವರ್ಧಕ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳಮೇಲೆ ಹಚ್ಚಬಾರದು ಎಂದು ಸುಪ್ರೀಂ ಕೋಟ್೯ ಮತ್ತು ಹೈಕೋರ್ಟ್ ಆದೇಶಿಸಿದರೂ ಮಸೀದಿಯ ಮೇಲಿನ ಧ್ವನಿವರ್ಧಕ ನಿಲ್ಲಿಸುತ್ತಿಲ್ಲ. ಇದರಿಂದ ಸಂಪೂರ್ಣ ಕಾನೂನು ಉಲ್ಲಂಘಿಸಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಹರಿಹಾಯ್ದರು.
ಸರ್ಕಾರ ನಿರ್ಲಕ್ಷ್ಯ ವನ್ನು ಖಂಡಿಸುವ ಸಲುವಾಗಿ ಈಗ ಶ್ರೀರಾಮ ಸೇನೆ ರಾಜ್ಯದ್ಯಾಂತ ದೇವಸ್ಥಾನಗಳ ಮೇಲೆ ಸುಪ್ರಭಾತ ಹಚ್ಚುತ್ತಿದೆ. ಈ ಪ್ರತಿಭಟನೆ ತಡೆಯಲು ಪೊಲೀಸ್ ತಡೆಯಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಧ್ವನಿವರ್ಧಕ ವಿರುದ್ಧ ಶ್ರೀರಾಮ ಸೇನೆಯ ಹೋರಾಟ ಮುಂದುವರಿಯುತ್ತದೆ. ಸರ್ಕಾರ ಸೂಕ್ತ ಕ್ರಮ ತೆಗೆಕೊಳ್ಳದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಮತ್ತು ಸ್ವತಃ ಶ್ರೀರಾಮ ಸೇನೆಯ ಕಾರ್ಯಕರ್ತರು ಮಸೀದಿಯ ಮೇಲಿನ ಧ್ವನಿವರ್ಧಕ ತೆರವುಗೊಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅಣ್ಣಪ್ಪ ದೇವಟಗಿ, ತಾಲೂಕಾಧ್ಯಕ್ಷ ಬಸವರಾಜ ದುರ್ಗಾದ ಇದ್ದರು.