ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ ಒಲಿದ ನೊಬೆಲ್​ ಪುರಸ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸೋಮವಾರ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ 2022ರ ಎಕನಾಮಿಕ್​ ಸೈನ್ಸ್​ ವಿಭಾಗದ ನೊಬೆಲ್ ಪ್ರಶಸ್ತಿಯನ್ನ ಘೋಷಿಸಿದೆ.

ಈ ವರ್ಷ ಸ್ವೆರಿಜಸ್ ರಿಕ್ಸ್‌ಬ್ಯಾಂಕ್ ಪ್ರಶಸ್ತಿಯನ್ನು ಅಮೆರಿಕದ, ವಾಷಿಂಗ್ಟನ್ ಡಿಸಿಯ ದಿ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್​ನ ಬೆನ್ ಎಸ್. ಬರ್ನಾಂಕೆ, ಯುಎಸ್​ಎ ಚಿಕಾಗೋ ವಿಶ್ವವಿದ್ಯಾಲಯದ ಡೌಗ್ಲಾಸ್ ಡಬ್ಲ್ಯೂ. ಡೈಮಂಡ್ ಹಾಗೂ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಫಿಲಿಪ್ ಹೆಚ್​.ಡೈಬ್ವಿಗ್​ ಅವರಿಗೆ ನೀಡಿ ಗೌರವಿಸಿದೆ.

ಬ್ಯಾಂಕ್‌ಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆಗಾಗಿ ಈ ನೊಬೆಲ್​ ಪ್ರಶಸ್ತಿಯನ್ನು ನೀಡಲಾಗಿದೆ. ಈ ವರ್ಷದ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿ ವಿಜೇತರಾದ ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ ಅವರು ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರ, ವಿಶೇಷವಾಗಿ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್​ಗಳ ಪಾತ್ರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಗಮನಾರ್ಹವಾಗಿ ಸುಧಾರಿಸಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ ಹೇಳಿದೆ.

ಕೋವಿಡ್-19 ನ ಎರಡು ವರ್ಷಗಳ ವಿರಾಮದ ನಂತರ ಡಿಸೆಂಬರ್’ನಲ್ಲಿ ಸ್ಟಾಕ್ಹೋಮ್‍ನಲ್ಲಿ ಪ್ರಶಸ್ತಿ ವಿಜೇತರು ತಮ್ಮ ಬಹುಮಾನ ಪದಕಗಳು ಮತ್ತು ಡಿಪ್ಲೊಮಾಗಳನ್ನ ಸ್ವೀಕರಿಸಲಿದ್ದಾರೆ ಎಂದು ನೊಬೆಲ್ ಫೌಂಡೇಶನ್ ಘೋಷಿಸಿದೆ. 2020 ಮತ್ತು 2021ರ ವಿಜೇತರನ್ನ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು. ನೊಬೆಲ್’ನಲ್ಲಿ 900,000 ಡಾಲರ್ ಬಹುಮಾನದ ಮೊತ್ತವೂ ಸೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!