Wednesday, February 1, 2023

Latest Posts

ಬನವಾಸಿ ಸಮೀಪ ಜಿಂಕೆ ಬೇಟೆ ಮಾಡಿದ ಮೂವರ ಬಂಧನ

ಹೊಸದಿಗಂತ ವರದಿ ಬನವಾಸಿ:

ಬನವಾಸಿ ಸಮೀಪದ ಕಾಂಡ್ರಜಿ ಗ್ರಾಮದಲ್ಲಿ ಜಿಂಕೆ ಬೇಟೆ ಮಾಡಿದ ಮೂವರನ್ನು ಬಂಧಿಸಿದ ಘಟನೆ ಮಂಗಳವಾರ ರಾತ್ರಿ ಬನವಾಸಿ ಅರಣ್ಯ ವಲಯದಲ್ಲಿ ನಡೆದಿದೆ.

ವನ್ಯ ಪ್ರಾಣಿ ಹತ್ಯೆ ಮಾಡಿದ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಜಿ.ಎಚ್.ವರದಾ ರಂಗನಾಥ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡಾಗ ಜಿಂಕೆ ಹತ್ಯೆ ಮಾಡಿರುವುದು ಕಂಡುಬಂದಿದೆ. ಕೊರ್ಲಕಟ್ಟ ಕಾಂಡ್ರಜಿ ಗ್ರಾಮದ ಮಂಜ ರಾಮ ನಾಯ್ಕ್(60) ಸುರೇಶ ರಾಮ ನಾಯ್ಕ್(53) ಚಂದ್ರ ರಾಮ ನಾಯ್ಕ್ (57) ಮೂವರು ಬಂಧಿತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಿ.ಎಚ್. ವರದ ರಂಗನಾಥ, ಉಪವಲಯ ಅರಣ್ಯಾಧಿಕಾರಿ ಸಂತೋಷ ಯಡಚಿ, ಅರಣ್ಯರಕ್ಷಕರಾದ ಮಂಜುನಾಥ ಶಿಗ್ಲಿ, ಗುಡ್ಡಪ್ಪ ಪಿ.ಎಮ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!