ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಚೆಂಗಲ್‌ಪಟ್ಟುವಿನ ಉರಪಕ್ಕಂ ರೈಲು ನಿಲ್ದಾಣದಲ್ಲಿ ರೈಲ್ವೆ ಹಳಿ ದಾಟುವ ವೇಳೆ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಮೂವರು ಮಕ್ಕಳಲ್ಲಿ ಇಬ್ಬರು ದಿವ್ಯಾಂಗರಾಗಿದ್ದು, ಶ್ರವಣ ದೋಷದ ಜತೆಗೆ ಮಾತು ಬರುತ್ತಿರಲಿಲ್ಲ. ಮಕ್ಕಳು ರೈಲ್ವೆ ಹಳಿ ಬಳಿ ಆಟ ಆಡುತ್ತಿದ್ದರು, ರೈಲಿನ ಶಬ್ದದ ಬಗ್ಗೆ ಮಕ್ಕಳಿಗೆ ತಿಳಿಯದ ಕಾರಣ ಮಕ್ಕಳಾದ ಸುರೇಶ್, ರವಿ ಹಾಗೂ ಮಂಜುನಾಥ್ ಮೃತಪಟ್ಟಿದ್ದಾರೆ.
ಹಬ್ಬಕ್ಕಾಗಿ ಪಕ್ಕದ ಊರಿಗೆ ಬಂದಿದ್ದ ಮಕ್ಕಳು ಹಳಿಗಳ ಬಳಿ ಆಟ ಆಡಲು ಬಂದಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದಿದೆ ಎಂದು ಗುಡುವಂಚೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.