ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಕುಶಾಲನಗರ:
ಕಳೆದ ವಾರ ಸುರಿದ ಭಾರೀ ಗಾಳಿ ಮಳೆಗೆ ಕೂಡುಮಂಗಳೂರು ಹಾಗೂ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ರಿಯಲ್ಲಿ ಮೂರು ಮನೆಗಳು ಕುಸಿದು ಭಾರೀ ನಷ್ಟ ಸಂಭವಿಸಿದೆ.
ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡ್ಲೂರು ನವಗ್ರಾಮದ ಮಂಜಳಾ ಮತ್ತು ಪ್ರಕಾಶ್ ಎಂಬವರಿಗೆ ಸೇರಿದ ಎರಡು ಮನೆಗಳ ಗೋಡೆಗಳು ಅತಿಯಾದ ಮಳೆಯಿಂದಾಗಿ ಕುಸಿದು ಬಿದ್ದಿವೆ. ನವಗ್ರಾಮದ ಚಿಕ್ಕ ಬೆಟ್ಟದಿಂದ ಕಲ್ಲು ಜರುಗಿ ಮಂಜುಳಾ ಎಂಬವರ ಮನೆಯ ಹಿಂದಿನ ಕಾಂಕ್ರಿಟ್ ಶೀಟ್ ಮೇಲೆ ಬಿದ್ದ ಪರಿಣಾಮ ಅನೇಕ ಶೀಟ್ ಗಳು ಒಡೆದು ಹೋಗಿವೆ.
ಸ್ಧಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯ ಕೆ.ಕೆ.ಭೋಗಪ್ಪ, ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ಕೂಡಿಗೆ ಪಂಚಾಯಿತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಪಾತಿ ವಿಜಯ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ.
ಗ್ರಾಮ ಪಂಚಾಯತ್ ಸದಸ್ಯೆ ಜಯಶ್ರೀ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಲೆಕ್ಕಾಧಿಕಾರಿ ಗುರುದರ್ಶನ್ , ಸಿಬ್ಬಂದಿಗಳಾದ ಅನಿಲ್, ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.