ಚಾಕು ಇರಿತ: ಮೂವರಿಗೆ ಗಾಯ

ಹೊಸದಿಗಂತ ವರದಿ ಗದಗ:

ಮೂವರ ಮೇಲೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ನಗರದ ಕಿಲ್ಲಾ ಓಣಿಯ ನಿವಾಸಿಗಳಾದ ಗೋಪಾಲ ಖೋಡೆ, ಮಾಧು ಬದಿ, ವಸಂತ ಬಾಕಳೆ ಎಂಬುವರ ಮೇಲೆ ಹಲ್ಲೆ ನಡೆದಿದೆ.

ರಾತ್ರಿ ಊಟಮಾಡಿ‌ ಮನೆ ಹೊರಗಡೆ ಮಾತನಾಡುತ್ತ ನಿಂತವರ ಮೇಲೆ ಬೈಕ್ ಮೇಲೆ ಬಂದ ನಾಲ್ವರು ಚಾಕು ಇರಿದು ಹಲ್ಲೆ ಮಾಡಿದ್ದಾರೆ.
ಹಲ್ಲೆಗೆ ಒಳಗಾದವರ ಕಣ್ಣು, ಎದೆ, ಕೈ, ಹೊಟ್ಟೆ ಭಾಗಗಳಿಗೆ ಗಾಯಗಳಾಗಿವೆ.

ಗಾಯಾಳುಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ, ಹಲ್ಲೆಕೋರರಲ್ಲಿ ನಿಷೇಧಿತ PFI ಸಂಘಟನೆ ಕಾರ್ಯಕರ್ತನೂ ಇದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!