ಗೋವಾದಲ್ಲಿ ಭೀಕರ ಅಪಘಾತ: ಬೆಳಗಾವಿ ಮೂಲದ ಮೂವರು ಪ್ರಯಾಣಿಕರು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಸ್ವಿಫ್ಟ್‌ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಬೆಳಗಾವಿ ಮೂಲಕ ಮೂವರು ಪ್ರಯಾಣಿಕರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ಗೋವಾದ ಮಾಪ್ಸಾ ನಗರದಲ್ಲಿ ನಡೆದಿದೆ.
ನಾಯರ್ ಅಂಗೋಲ್ಕರ್ (28), ರೋಹನ್ ಗಡದ್ (26) ಮತ್ತು ಸನ್ನಿ ಅನ್ವೇಕರ್ (31) ಮೃತಪಟ್ಟ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡ ಮತ್ತೊರ್ವ ಪ್ರಯಾಣಿಕ ವಿಶಾಲ್ ಕರೆಕರ್ (27)ರನ್ನು ಗೋವಾದ ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋವಾದ ಮಾಪ್ಸಾ ನಗರದ ಮಪುಸಾದ ಕುಚೇಲಿ ಬಳಿ ಮುಂಜಾನೆ 4 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಗೋವಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!