ನಿರ್ಭಯಾಗೆ ಜನಿಸಿದ ಮೂರು ಸಿಂಹದ ಮರಿಗಳು ವೀಕ್ಷಣೆಗೆ ಮುಕ್ತ!

ಹೊಸದಿಗಂತ ವರದಿ ಮೈಸೂರು:

ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿ ಮೂರು ಸಿಂಹದ ಮರಿಗಳ ಜನನವಾಗಿದ್ದು, ಅವುಗಳನ್ನು ಗುರುವಾರ ಸಂದರ್ಶಕರು, ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.

ಗಂಡು ಸಿಂಹ ರಾಜು ಹಾಗೂ ಹೆಣ್ಣು ಸಿಂಹ ನಿರ್ಭಯ ಜೋಡಿಗೆ ಇತ್ತೀಚೆಗೆ ಮೂರು ಮರಿಗಳು ಜನಿಸಿದ್ದು, ಅದರಲ್ಲಿ 2ಗಂಡು ಹಾಗೂ ಒಂದು ಹೆಣ್ಣು ಮರಿಯಿದೆ. ಮೃಗಾಲಯಕ್ಕೆ ಇಂದು ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್,  ಸಿಂಹಿಣಿ ‘ನಿರ್ಭಯಾ’ ಜನ್ಮನೀಡಿರುವ ಮೂರು ಮರಿಗಳ ಸಾರ್ವಜನಿಕ ವೀಕ್ಷಣೆಗೆ ಚಾಲನೆ ನೀಡಿ, ಕೆಲಕಾಲ ಮೂರು ಸಿಂಹ ಮರಿಗಳ ಆಟೋಟವನ್ನು ವೀಕ್ಷಿಸಿ, ಖುಷಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಮೈಸೂರು ನಗರಪಾಲಿಕೆಯ ಮೇಯರ್ ಶಿವಕುಮಾರ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!