ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಫ್ಘಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಮನೆ ಬಳಿ ಮೂರು ರಾಕೆಟ್ ದಾಳಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘನಿ ಅವರ ನಿವಾಸದ ಬಳಿ ಮೂರು ರಾಕೆಟ್ ದಾಳಿ ನಡೆಸಿದೆ.
ಮುಸ್ಲಿಂ ಸಮುದಾಯದ ಈದ್‌ ಅಲ್‌-ಅಧಾ ಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗ ಈ ರಾಕೆಟ್ ದಾಳಿ ನಡೆದಿದೆ. ಈ ವೇಳೆ ಒಂದು ಕಾರು ಭಸ್ಮವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ‌ಅಫ್ಗಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ಟಾನಿಕ್ಜೈ ಹೇಳಿದ್ದಾರೆ.
ಅಧ್ಯಕ್ಷ ಆಶ್ರಫ್ ಘನಿ ಅವರ ನಿವಾಸದ ಸುತ್ತ ಈಗಾಗಲೇ ಭದ್ರತಾ ವ್ಯವಸ್ಥೆಗಾಗಿ ಸಿಮೆಂಟ್ಗೋಡೆಗಳನ್ನು ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.
ಅಫ್ಘಾನ್ ನಲ್ಲಿದ್ದ ಅಮೆರಿಕದ ಸೇನೆಯನ್ನು ಹಿಂಪಡೆದ ನಂತರ ಈ ಘಟನೆ ನಡೆಯುತ್ತಿರುವುದು. ತಾಲಿಬಾನ್ ಹಾಗೂ ಅಫ್ಘಾನ್ ನಡುವೆ ಯುದ್ಧ ನಡೆಯುವ ವಾತಾವರಣ ಸೃಷ್ಟಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss