ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ. ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಈ ದುರ್ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಸಂಜೆ ಫಾರೂಕ್ನಗರದ ಪಟೌಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಬ್ಬರನ್ನು ಅವಶೇಷದ ಅಡಿಯಿಂದ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.
ಕಾರ್ಮಿಕರಿಗೆ ವಾಸಕ್ಕೆಂದು ನಿರ್ಮಿಸಲಾಗಿದ್ದ ಕಟ್ಟಡ ಕುಸಿದಿದ್ದು, ಕುಸಿತದ ವೇಳೆ ಎಲ್ಲ ಕಾರ್ಮಿಕರು ಸ್ಥಳದಲ್ಲಿ ಇರಲಿಲ್ಲ.
ಅವಶೇಷದಡಿಯಲ್ಲಿ ಸಿಲುಕಿರುವವರೆಲ್ಲರನ್ನು ರಕ್ಷಿಸಲು 18 ರಿಂದ 20 ತಾಸು ಬೇಕಾಗಬಹುದು ಎಂದು ಜಿಲ್ಲಾಧಿಕಾರಿ ಯಶ್ ಗಾರ್ಗ್ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣದಲ್ಲಿ ರಚನಾತ್ಮಕ ದೋಷದಿಂದಾಗಿ ಕಟ್ಟಡ ಕುಸಿದಿದೆ. ಮೊದಲು ರಕ್ಷಣಾ ಕಾರ್ಯಕ್ಕೆ ಆದ್ಯತೆ ನೀಡುತ್ತೇವೆ. ನಂತರ ತನಿಖೆ ನಡೆಸಲಾಗುವುದು ಎಂದು ಯಶ್ ಗಾರ್ಗ್ ಹೇಳಿದ್ದಾರೆ.
#UPDATE | One dead after a three-story building collapsed in Gurugram's Khawaspur area. A person has been rescued & sent to hospital for treatment. 2 people are feared to trap. Rescue operation is underway: Deputy Commissioner Yash Garg pic.twitter.com/RcP7lgANa8
— ANI (@ANI) July 18, 2021