Wednesday, August 17, 2022

Latest Posts

ಕಮಲಾ ಹ್ಯಾರಿಸ್ ಬಾಲ್ಯ, ಸಾಧನೆ ಪರಿಚಯಿಸುವ 300 ಪುಟಗಳ ಪುಸ್ತಕ ಬಿಡುಗಡೆಗೆ ಸಿದ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಉಪಾಧ್ಯಕ್ಷೆ ಸ್ಥಾನದಲ್ಲಿರುವ ಮೊದಲ ಭಾರತೀಯ ಮಹಿಳೆ ಕಮಲಾ ದೇವಿ ಹ್ಯಾರಿಸ್. ಇವರ ಜೀವನ ಕಥೆಯನ್ನು ಹಿರಿಯ ಪತ್ರಕರ್ತ ಚಿದಾನಂದ ರಾಜ್ ಘಟ್ಟ ಅವರು 300 ಪುಟಗಳ ಕಥೆಯ ಮೂಲಕ ಪುಸ್ತಕದ ರೂಪಕ್ಕೆ ಹೊರ ತಂದಿದ್ದಾರೆ.
ಈ ಪುಸ್ತಕದಲ್ಲಿ ಕಮಲಾ ಹ್ಯಾರಿಸ್ ರ ಬಾಲ್ಯ, ವಿದ್ಯಾಭ್ಯಾಸ ಸೇರಿದಂತೆ ಅವರು ಅಮೆರಿಕದ ಉನ್ನತ ಸ್ಥಾನಕ್ಕೇರಲು ಪಟ್ಟ ಶ್ರಮವನ್ನು ವಿವರಿಸಲಾಗಿದೆ.
ಚಿದಾನಂದ ಅವರು ಬರೆದ ‘ಕಮಲಾ ಹ್ಯಾರಿಸ್: ಫೆನೋಮಿನಲ್ ವುಮೆನ್’ ಪುಸ್ತಕ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ಈ ಪುಸ್ತಕದಲ್ಲಿ ಲೇಖಕರು ಕಮಲಾ ಹ್ಯಾರಿಸ್ ಅವರ ಜೀವನದ ಹಲವು ವಿಚಾರಗಳನ್ನು ಬರೆದಿದ್ದಾರೆ. ಕಮಲಾ ದೇವಿ ಹ್ಯಾರಿಸ್ ಅವರ ಜನನ ಪ್ರಮಾಣ ಪತ್ರದಲ್ಲಿ ಅವರ ಹೆಸರಿನಲ್ಲಿರುವ ದೇವಿ ಪದ ಮುಂಚೆ ಅಯ್ಯರ್ ಎಂದು ಉಲ್ಲೇಖಿಸಲಾಗಿತ್ತು.
ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಕುಟುಂಬದಿಂದ ಬಂದವರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂಡೋಕ್ರಿನಾಲಜಿ ಅಧ್ಯಯನ ಮಾಡಲು ಅವರು 1958 ರಲ್ಲಿ ಅಮೆರಿಕಕ್ಕೆ ತೆರಳಿದರು. ಬಳಿಕ ಅಲ್ಲಿಯೇ ಅವರು ಡೊನಾಲ್ಡ್ ಹ್ಯಾರಿಸ್ ನನ್ನು ಮದುವೆಯಾದರು.
ಹೀಗೆ ಮಹಿಳೆಯರ ರಾಜಕೀಯ ಜೀವನ ಹಾಗೂ ಅಧಿಕಾರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!