ತಾಳಿ ಸರಕ್ಕಾಗಿ ಮಹಿಳೆಯ ಜೊತೆ ಖದೀಮರ ಕಾಳಗ: ಹಲ್ಲೆ ನಡೆಸಿ ಚಿನ್ನದೊಂದಿಗೆ ಪರಾರಿ!

ಹೊಸದಿಗಂತ ವರದಿ ರಾಮನಗರ: ಟೀ ಅಂಗಡಿಯಲ್ಲಿ ಒಬ್ಬರೇ ಇದ್ದ ಮಹಿಳೆಯನ್ನು ಗುರಿಯಾಗಿಸಿಕೊಂಡ ಇಬ್ಬರು ಸರಗಳ್ಳರು, ಅವರ ಕೊರಳಿನಲ್ಲಿದ್ದ ತಾಳಿ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಮನಗರ ತಾಲ್ಲೂಕಿನ ಬಸವನಪುರ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯಲ್ಲಿ ನಡೆದಿದೆ. ಸರ ಕಸಿಯುವುದನ್ನು ತಡೆಯಲು ಮಹಿಳೆ ಪ್ರತಿರೋಧ ತೋರಿದಾಗ ಕಳ್ಳರು ಹಲ್ಲೆ ನಡೆಸಿದ್ದು, ಅವರ ತಲೆಗೆ ಗಾಯವಾಗಿದೆ. ಬಸವನಪುರ ಗ್ರಾಮದ ಜಯಲಕ್ಷ್ಮಮ್ಮ ಗಾಯಗೊಂಡ ಮಹಿಳೆ. ಅವರಿಗೆ ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ … Continue reading ತಾಳಿ ಸರಕ್ಕಾಗಿ ಮಹಿಳೆಯ ಜೊತೆ ಖದೀಮರ ಕಾಳಗ: ಹಲ್ಲೆ ನಡೆಸಿ ಚಿನ್ನದೊಂದಿಗೆ ಪರಾರಿ!