ಹೊಸದಿಗಂತ ವರದಿ,ಬೆಳಗಾವಿ:
ಮಹೇಶ ಕುಮಠಳ್ಳಿ ಸೇರಿದಂತೆ 17 ಜನ ವಲಸಿಗರಿಗೆ ಬಿಜೆಪಿ ಟಿಕೆಟ್ ದೊರೆಯುತ್ತದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಯಾಕಿಷ್ಟು ಚಡಪಡಿಸುತ್ತಿದ್ದಾರೆಂದು ಗೋತ್ತಿಲ್ಲ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಭಾನುವಾರ ಬೆಳಗಾವಿ ಸಮೀಪದ ಮಹಾರಾಷ್ಟ್ರದ ಶಿನ್ನೊಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ 17 ಜನರಿಗೆ ಬಿಜೆಪಿ ಹೈಕಮಾಂಡ ಆರ್ಶೀವಾದ ಮಾಡಲಿದೆ ಎಂದರು.
ಲಕ್ಷ್ಮಣ ಅಣ್ಣಾ ಇಷ್ಟೊಂದು ಹತಾಶೆ ಆಗತ್ತಿರೋದೆಕೆ ಕಾರಣ ಗೊತ್ತಾಗುತ್ತಿಲ್ಲ. ನಮಗೆ ವರಷ್ಠರಿದ್ದಾರೆ. ಅವರ ಮುಂದೆ ನಾನು ಲಕ್ಷ್ಮಣ ಸವದಿ ಯಾವ ಗಿಡಿದ ತಪ್ಪಲು. ನಮ್ಮ ರಾಷ್ಟ್ರೀಯ ನಾಯಕರು ಹೆಮ್ಮರವಾಗಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಬೇಕು. ಸೋಲು ಗೆಲುವು ದೇವರ ಇಚ್ಛೆ, ಏಕೆ ಇಷ್ಟು ಚಡಪಡಿಕೆ. ಆರಾಮವಾಗಿರಿ ಎಂದು ರಮೇಶ ಜಾರಕಿಹೊಳಿ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಚಾಟಿ ಬಿಸಿದರು.