ಹೊಸ ದಿಗಂತ ವರದಿ, ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ನರಹಂತಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿದಿರುವ ಬೆನ್ನಲ್ಲೇ
ಬೆಳ್ಳೂರು ಗ್ರಾಮದಲ್ಲಿ ಹಸುವೊಂದರ ಮೇಲೆ ಹುಲಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.
ಗ್ರಾಮದ ನಿವಾಸಿ ಬಾಚೀರ ಸುಜಾ ಅವರಿಗೆ ಸೇರಿದ ಹಸುವನ್ನು ಹುಲಿ ಗಂಭೀರವಾಗಿ ಗಾಯಗೊಳಿಸಿದೆ.
ಇದು ನರಹಂತಕ ಹುಲಿಯ ಕೃತ್ಯವೋ ಅಥವಾ ಬೇರೆ ವ್ಯಾಘ್ರನ ಉಪಟಳವೋ ಎಂಬುದು ದೃಢಪಟ್ಟಿಲ್ಲ.
ಮತ್ತೊಂದೆಡೆ ಜಿಲ್ಲಾ ಕೇಂದ್ರ ಮಡಿಕೇರಿಯ ಹೊರವಲಯದಲ್ಲಿರುವ ಕರ್ಣಂಗೇರಿ ಗ್ರಾಮದಲ್ಲೂ ಹುಲಿಯ ಚಲನವಲನ ಕಂಡು ಬಂದಿದ್ದು, ಇದೀಗ ಉತ್ತರ ಕೊಡಗಿನ ಜನತೆಯೂ ಆತಂಕಗೊಳ್ಳುವಂತಾಗಿದೆ.
ಕರ್ಣಂಗೇರಿಯ ಅಂತೋಣಿ ಎಸ್ಟೇಟ್ ಗೆ ಸೇರಿದ ಗದ್ದೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡ ಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.