Friday, August 12, 2022

Latest Posts

ಬೋನಿಗೆ ಬಿದ್ದ ಚಿರತೆ : ಸಮಾಧಾನದ ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು

ದಿಗಂತ ವರದಿ ಮೈಸೂರು:

ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯವರ ಬೋನಿಗೆ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಕಡಕೊಳ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಹಲವು ದಿನಗಳಿಂದ ಕಡಕೊಳ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಉಪಟಳ ಹೆಚ್ಚಾಗಿತ್ತು. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಅಲ್ಲದೇ ಬೀದಿ ನಾಯಿಗಳನ್ನು ಎತ್ತಿಕೊಂಡು ಹೋಗುತ್ತಿತ್ತು. ಅಲ್ಲದೇ ಗ್ರಾಮದ ಬಾಲಕ ಮೇಲೆ ದಾಳಿ ನಡೆಸಿತ್ತು. ಇದರಿಂದಾಗಿ ಆತಂಕಗೊAಡಿದ್ದ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯವರಿಗೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ
ಕಡಕೊಳ ಗ್ರಾಮದ ಪಕ್ಕದಲ್ಲಿರುವ ಬೀರೇಗೌಡನ ಹುಂಡಿ ಗ್ರಾಮದ ಶಿವಬೀರ ಅವರ ತೋಟದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಇಂದು ಬೆಳಗ್ಗೆ ಸುಮಾರು ಎಂಟು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದು ಸೆರೆಯಾಯಿತು. ಈ ವಿಷಯವನ್ನು ತಿಳಿದ ಗ್ರಾಮಸ್ಥರು ಸೆರೆ ಸಿಕ್ಕ ಚಿರತೆಯನ್ನು ನೋಡಿ ಸದ್ಯ ಇದರ ಕಾಟ ನಮಗೆ ತಪ್ಪಿತ್ತಲ್ಲ ಎಂದು ಸಮಾಧಾನದ ನಿಟ್ಟಿಸಿರು ಬಿಟ್ಟರು. . ಕೆಲವು ದಿನಗಳ ಹಿಂದೆ ಬಾಲಕನ ಮೇಲೆ ದಾಳಿ ಮಾಡಿದ ಚಿರತೆ ಇದೆ ಇರಬಹುದೆಂದು ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈಗ ಒಂದು ಚಿರತೆ ಸೆರೆಯಾಗಿದ್ದು, ಇನ್ನೂ ಐದರಿಂದ ಆರು ಚಿರತೆಗಳು ಇರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಉಪ ಅರಣ್ಯ ವಲಯಾಧಿಕಾರಿ ಮೋಹನ್, ವಲಯ ಅರಣ್ಯಧಿಕಾರಿ ಗಿರೀಶ್. ಕಡಕೋಳ ಉಪ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೆರೆ ಸಿಕ್ಕ ಚಿರತೆಯನ್ನು ಅಲ್ಲಿಂದ ಬೋನಿನಲ್ಲಿ ಸಾಗಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss