Thursday, July 7, 2022

Latest Posts

ಇನ್ಸ್ಟಾಗ್ರಾಂನಲ್ಲಿ ಸ್ಕ್ರಾಲ್ ಮಾಡುತ್ತಾ ಕಾಲಹರಣ ಮಾಡುವವರಿಗೆ ಹೊಸ ಫೀಚರ್: ‘ಟೈಮ್ ಫಾರ್ ಎ ಬ್ರೇಕ್?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುತ್ತಾ ಕುಳಿತರೆ ಸಮಯ ಹೋಗೋದೇ ಗೊತ್ತಾಗೋದಿಲ್ಲ.
ಆದರೆ ಈ ರೀತಿ ಸಮಯದ ಅರಿವಿಲ್ಲದೆ ಸ್ಕ್ರೋಲ್ ಮಾಡುತ್ತಾ ಕೂರುವುದು, ಯುವ ಪೀಳಿಗೆ ಮೇಲೆ ಪರಿಣಾಮ ಬೀರುತ್ತದೆ.
ಜೊತೆಗೆ ಹೆಚ್ಚಿನ ಸಮಯ ಸಾಮಾಜಿಕ ಜಾಲತಾಣದಲ್ಲೇ ಕಳೆಯುವಂತೆ ಮಾಡುತ್ತದೆ. ಈ ಹಿನ್ನೆಲೆ ಇನ್ಸ್ಟಾಗ್ರಾಂ ಹೊಸ ಫೀಚರ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಇನ್ಮುಂದೆ ಅತೀ ಹೆಚ್ಚು ಸಮಯ ಸ್ಕ್ರಾಲ್ ಮಾಡುತ್ತಾ ಸಮಯ ಕಳೆದರೆ ವಿರಾಮ ತೆಗೆದುಕೊಳ್ಳಿ( time for a break?) ಎನ್ನುವ ಸಂದೇಶ್ ಪಾಪ್ ಅಪ್ ಆಗುತ್ತದೆ.

ಇನ್ಸ್ಟಾಗ್ರಾಂನಲ್ಲಿ ಹೆಚ್ಚಿನ ಮಂದಿ ತಮ್ಮ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಾರೆ.
ಇವುಗಳನ್ನು ಸ್ಕ್ರಾಲ್ ಮಾಡುತ್ತಾ ಹೋದರೆ ಅವು ಮುಗಿಯುವುದೇ ಇಲ್ಲ, ಒಂದರ ನಂತರ ಒಂದರಂತೆ ಬರುತ್ತಲೇ ಇರುತ್ತದೆ. ಹಾಗಾಗಿ ಇನ್ಮುಂದೆ ಕಾಲಹರಣ ಆಗಬಾರದು ಎನ್ನುವ ಕಾರಣಕ್ಕಾಗಿ ಟೈಮ್ ಫಾರ್ ಎ ಬ್ರೇಕ್ ಫೀಚರ್ ಜಾರಿಗೆ ಬಂದಿದೆ.

ಇನ್ಸ್ಟಾಗ್ರಾಂನಲ್ಲಿ ಸ್ಕ್ರಾಲ್ ಮಾಡಿಕೊಂಡು ಕಾಲಹರಣ ಮಾಡುವ ಯುವಪೀಳಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಫೀಚರ್ ಪರಿಚಯಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಸದ್ಯ ಈ ಸವಲತ್ತನ್ನು ಅಮೆರಿಕ,ಇಂಗ್ಲೆಂಡ್,ಕೆನಡಾ,ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಲಾಂಚ್ ಮಾಡಲಾಗಿದೆ. ಮುಂದಿನ ವರ್ಷದಲ್ಲಿ ಎಲ್ಲ ದೇಶಗಳಲ್ಲಿಯೂ ಈ ಫೀಚರ್ ಜಾರಿಗೆ ಬರಲಿದೆ.

Instagram's new Take a Break featureಇನ್ಸ್ಟಾಗ್ರಾಂನ ಸೆಟ್ಟಿಂಗ್ಸ್‌ನಲ್ಲಿ ಎಷ್ಟು ಸಮಯಕ್ಕೊಮ್ಮೆ ಬ್ರೇಕ್ ಬೇಕು ಎನ್ನುವುದನ್ನು ನಾವೇ ಸೆಟ್ ಮಾಡಬಹುದಾಗಿದೆ. ಉದಾಹರಣೆಗೆ 10 ನಿಮಿಷಗಳು ಸ್ಕ್ರಾಲ್ ಮಾಡಿದ ನಂತರ ಬ್ರೇಕ್ ಮೆಸೇಜ್ ಪಾಪ್ ಅಪ್ ಆಗಲಿ ಎನ್ನುವ ಸೆಟ್ಟಿಂಗ್ ಒಕೆ ಮಾಡಿದರೆ ಅಷ್ಟು ಸಮಯಕ್ಕೆ ಪಾಪ್ ಅಪ್ ಆಗುತ್ತದೆ. ಇದೇ ರೀತಿ 20, 30 ನಿಮಿಷಕ್ಕೂ ಒಂದು ಅಲರ್ಟ್ ಇಟ್ಟುಕೊಳ್ಳಬಹುದು.

ಟೈಮ್ ಫಾರ್ ಎ ಬ್ರೇಕ್?
ಟೈಮ್ ಫಾರ್ ಎ ಬ್ರೇಕ್ ಎನ್ನುವ ಸಂದೇಶ ಬಂದು, ಇದರಲ್ಲಿ ನೀವು ಈ ರೀತಿ ಮಾಡಬಹುದು ಎನ್ನುವ ಸಲಹೆಗಳು ಕೂಡ ಬರುತ್ತವೆ.
ಸ್ವಲ್ಪ ಸಮಯ ದೀರ್ಘವಾಗಿ ಉಸಿರಾಡಿ
ಏನಾದರೂ ಬರೆದು ಪೋಸ್ಟ್ ಮಾಡಿ.
ನಿಮ್ಮಿಷ್ಟದ ಒಂದು ಹಾಡು ಕೇಳಿ
ಬೇರೆ ಕೆಲಸಗಳಿದ್ದರೆ ಮಾಡಿಕೊಳ್ಳಿ ಎನ್ನುವ ಸಲಹೆಗಳು ಬರುತ್ತವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss