ಹೊಸದಿಗಂತ ವರದಿ, ಮದ್ದೂರು:
ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಶಾಲಾ ಬಾಲಕ ಸ್ಥಳದಲ್ಲೇ ಅಸುನಿಗಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ಅಡಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಗ್ರಾಮದ ಮಹದೇವಯ್ಯ ಅವರ ಪುತ್ರ ಮಧುಸೂದನ್ (8)ಮೃತ ಬಾಲಕ, ಅಡಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಧುಸೂದನ್, ಬೆಳಗ್ಗೆ 9.45 ರ ಸುಮಾರಿಗೆ ಶಾಲೆಗೆ ತೆರಳುತ್ತಿದ್ದನು, ಹೂತಗೆರೆ ಗ್ರಾಮದಿಂದ ಬೆಂಗಳೂರು ಮೈಸೂರು ರಾಷ್ಟ್ರಿಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಮಣ್ಣು ಸಾಗಿಸುತ್ತಿದ್ದ ಡಿಬಿಎಲ್ ಕಂಪನಿಯ ಟಿಪ್ಪರ್ ಲಾರಿ ಚಾಲಕ ನಿಯಂತ್ರಣ ತಪ್ಪಿ ಬಾಲಕ ಮಧುಸೂದನ್ ಮೇಲೆ ಲಾರಿ ಹರಿಸಿ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೆ ಕೊನೆರೆಯುಸಿರೆಳಿದ್ದಾನೆ.
ಅಪಘಾತವಾದ ತಕ್ಷಣ ಟಿಪ್ಪರ್ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಕೆಸ್ತೂರು ಪಿಎಸ್ಐ ದಯಾನಂದ್ ಲಾರಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕೆ ಧಾವಿಸಿದ ಬಿಇಒ ಮಹದೇವು ಹಾಗೂ ಸಿಬ್ಬಂದಿಗಳು ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಶವವನ್ನು ಆಸ್ಪತ್ರೆಗೆ ಸಾಗಿಲಸು ಕ್ರಮ ಕೈಗೊಂಡರು. ನಂತರ ಬಾಲಕ ಕುಟುಂಬಕ್ಕೆ ಸಾಂತ್ವನ ಹೇಳಿದ ಬಿಇಒ ಮಹದೇವು ಸರ್ಕಾರದಿಂದ ಬರುವ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಕ್ರಮವಹಿಸುವುದಾಗ ಭರವಸೆ ನಿಡಿದರು.