ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಪ್ಪರ್ ಲಾರಿ ಹರಿದು ಆಟೋ ಚಾಲಕ ಸಾವನ್ನಪ್ಪಿರುವ ದುರಂತ ಘಟನೆ ಕೋಲಾರ ತಾಲೂಕಿನ ಮಡೇರಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸೂಲೂರು ಗ್ರಾಮದ ನಿವಾಸಿ ಶಶಿಕುಮಾರ್ (29) ಮೃತ ದುರ್ದೈವಿ.
ವೇಗವಾಗಿ ಬಂದ ಟಿಪ್ಪರ್ ಲಾರಿ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಸ್ತೆಗೆ ಬಿದ್ದ ಆಟೋ ಚಾಲಕನ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಸ್ಥಳದಲ್ಲೇ ಚಾಲಕ ಸಾವನ್ನಪ್ಪಿದ್ದು, ದೇಹ ಛಿದ್ರ ಛಿದ್ರವಾಗಿದೆ.
ಅಪಘಾತದ ಬಳಿಕ ಟಿಪ್ಪರ್ ಲಾರಿ ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.