ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಮೊದಲ’ ರಾತ್ರಿಗೂ ಮುನ್ನ ಗಮನದಲ್ಲಿರಬೇಕಾದ ವಿಷಯಗಳಿವು… ಎಡವಿದರೆ ಎಡವಟ್ಟು ಗ್ಯಾರೆಂಟಿ!

ಹುಡುಗಿಯರೇ ಅಥವಾ ಬರೀ ಹುಡುಗರೇ ಒಟ್ಟಾದರೆ ಏನು ಮಾತನಾಡ್ತಾರೆ ಗೊತ್ತಾ? ಬಹುತೇಕರು ಸುತ್ತಿ ಬಳಸಿ ಕೊನೆಗೆ ಬರೋದು ಸೆಕ್ಸ್ ವಿಷಯಕ್ಕೆ!
ಯಾಕೆ ಅಂದ್ರೆ ಈ ವಿಚಾರದಲ್ಲಿರುವ ಕ್ಯೂರಿಯಾಸಿಟಿ ಇನ್ಯಾವ ವಿಷಯದಲ್ಲೂ ಇಲ್ಲ.ಮೊದಲ ಬಾರಿ ಸೆಕ್ಸ್ ಗೆ ನೀವು ಹೇಗೆ ತಯಾರಾಗಬೇಕು ಗೊತ್ತಾ?
ಈ ವಿಷಯಗಳನ್ನು ಗಮನದಲ್ಲಿಡಿ..

ಸರಿಯಾಗಿ ವಿಷಯ ತಿಳಿದುಕೊಳ್ಳಿ:

ಮೊದಲ ಬಾರಿ ಸೆಕ್ಸ್ ಮಾಡುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳಿ. ಸರಿಯಾದ ಮಾಹಿತಿ ತುಂಬಾನೇ ಮುಖ್ಯ. ಯಾರೋ ನಿಮ್ಮ ಸ್ನೇಹಿತರು ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಹೇಳಿರಬಹುದು. ಅವರನ್ನು ಬಿಟ್ಟು ದೊಡ್ಡವರನ್ನು ಕೇಳಿ. ಅಣ್ಣ, ಅಕ್ಕ, ಕಸಿನ್ ಹೀಗೆ ಇವರ ಬಳಿ ಕೇಳಿ ತಿಳಿದುಕೊಳ್ಳಿ.

ಪ್ರಿಪೇರ್ ಆಗಿ:
ಇದೇನಪ್ಪ ಎಕ್ಸಾಂಗೆ ಪ್ರಿಪೇರ್ ಆಗಿ ಹೋಗುವ ಹಾಗೆ ಇಲ್ಲಿಗೂ ಪ್ರಿಪೇರ್ ಆಗಿ ಹೋಗ್ಬೇಕಾ ಅನ್ಕೋತೀರಾ? ಖಂಡಿತಾ ಹೌದು… ಮೆಥಡ್ಸ್, ಪ್ರೊಟೆಕ್ಷನ್, ರೋಗಗಳು, ಸೆಕ್ಸುಯಲ್ ಆರ್ಗನ್ಸ್, ಕಾಂಡೋಮ್ಸ್, ಲ್ಯುಬ್ರಿಕೆಂಟ್ಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

ಇಬ್ಬರಿಗೂ ಒಪ್ಪಿಗೆ ಇದೆಯಾ?:
ಇದು ತುಂಬಾನೇ ಮುಖ್ಯ. ಹಲವರಿಗೆ ಮದುವೆಯಾದ ಮೇಲೂ ತಕ್ಷಣವೇ ಬೆರೆಯೋಕೆ ಇಷ್ಟ ಇರೋದಿಲ್ಲ. ಅರ್ಥ ಮಾಡಿಕೊಳ್ಳೋಕೆ ಸಮಯ ತೆಗೆದುಕೊಳ್ಳುತ್ತಾರೆ. ಪ್ರತೀ ಬಾರಿಯೂ ಸೆಕ್ಸ್ ಮುನ್ನ ಒಪ್ಪಿಗೆ ತೆಗೆದುಕೊಳ್ಳುವುದು ಕಡ್ಡಾಯ.

ಭಯ ಬೇಡ:
ಹಲವರು ಅವರಿವರ ಮಾತುಗಳನ್ನು ಕಟ್ಟಿಕೊಂಡೇ ಬೆಡ್‌ರೂಂಗೆ ಕಾಲಿಡುತ್ತಾರೆ. ಹುಡುಗಿಯರಿಗೆ ನೋವಿನ ಭಯ. ಹುಡುಗರಿಗೆ ಹುಡುಗಿಗೆ ಸ್ಯಾಟಿಸ್ಫೈ ಆಗದಿದ್ದರೆ ಎನ್ನುವ ಭಯ. ಇದು ಕಾಮನ್. ಇದರ ಬಗ್ಗೆ ಪರಸ್ಪರ ಮಾತನಾಡಿ. ಅವರಿಗೇನು ಬೇಕು ಕೇಳಿಕೊಳ್ಳಿ. ಪರಸ್ಪರ ನಂಬಿಕೆ ಇರಲೇಬೇಕು.

ಫೋರ್ ಪ್ಲೇ ಬೇಕು:
ಫೋರ್ ಇಲ್ಲದೆ ಸೀದಾ ಸೆಕ್ಸ್‌ಗೆ ಮುನ್ನುಗ್ಗಬೇಡಿ. ಫೋರ್ ಪ್ಲೇ ಇಲ್ಲದೆ ಆರ್ಗಾಸಮ್ ಅಸಾಧ್ಯ. ಸೆಕ್ಸ್‌ನ ನಿಜವಾಗಿಯೂ ಎಂಜಾಯ್ ಮಾಡುವ ಮಂದಿ ಫೋರ್ ಪ್ಲೇಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss