ಕುಂಬಳಕಾಯಿಯಲ್ಲಿ ಜೀವಸತ್ವಗಳು, ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹೇರಳವಾಗಿವೆ. ಸಾಕಷ್ಟು ಪ್ರಮಾಣದ ವಿಟಮಿನ್ ಡಿಯನ್ನು ಸಹ ಹೊಂದಿದೆ.
ಮಾಗಿದ ಕುಂಬಳಕಾಯಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಸಿಪ್ಪೆಯನ್ನು ತೆಗೆದು ಹಾಕಿ ನಂತರ ಇದನ್ನು ಬೇಯಸಿ. ನಂತರ ಅದನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಂಡು ಫಿಲ್ಟರ್ ಮಾಡಿ. ಅದಕ್ಕೆ ಸ್ವಲ್ಪ ಸೇಬಿನ ಚೂರುಗಳನ್ನು ಸೇರಿಸಿ. ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿ. ಜ್ಯೂಸ್ ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನವಾಗುತ್ತದೆ. ಇದರಲ್ಲಿರುವ ಫೈಬರ್ ಪ್ರಮಾಣವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.