Tuesday, March 21, 2023

Latest Posts

SAVE MONEY| ಈ ಸಲಹೆಗಳನ್ನು ಪಾಲಿಸಿ, ಎಸಿ ಬಿಲ್ ಅರ್ಧದಷ್ಟು ಕಡಿಮೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾತಾವರಣದಲ್ಲಿ ತಾಪಮಾನ ಹೆಚ್ಚಾಗುವುದು ಮಾತ್ರವಲ್ಲ, ಕಾವು ಹೆಚ್ಚುತ್ತಿದೆ. ಇದೀಗ ಎಸಿ ಮತ್ತು ಫ್ಯಾನ್‌ಗಳಿಗೆ ಬಹಳ ಡಿಮ್ಯಾಂಡ್.‌  ಕೆಲವರು ಹೊಸ ಎಸಿಗಳನ್ನು ಖರೀದಿಗೂ ಮುಂದಾಗಿದದಾರೆ. ಮಾರ್ಚ್‌ಗಿಂತ ಏಪ್ರಿಲ್‌ನಲ್ಲಿ ವಿದ್ಯುತ್‌ ಬಿಲ್‌ ಜಾಸ್ತಿಯಾಗಲಿದೆ ಎಂಬ ಭಯ ಅನೇಕರಲ್ಲಿದೆ. ಅದರಲ್ಲೂ ಎಸಿ ಬಳಸಿದರೆ ಸಾವಿರಾರು ರೂಪಾಯಿ ಬಿಲ್ ಬರುತ್ತದೆ. ಇದರಿಂದ ಬಚಾವ್‌ ಆಗೋದು ಹೇಗೆ?

ಈ ಸಿಂಪಲ್ ಟಿಪ್ಸ್ ಪಾಲಿಸಿದರೆ 24 ಗಂಟೆ ಎಸಿ ಆನ್ ಮಾಡಿದರೂ ಬಿಲ್ ಕಮ್ಮಿ.

  •  ಡೀಫಾಲ್ಟ್ ತಾಪಮಾನವನ್ನು ಇಟ್ಟುಕೊಳ್ಳುವುದರ ಮೂಲಕ ಬಿಲ್‌ ಕಡಿಮೆ ಮಾಡಿ
  • ನಿಮ್ಮ ಎಸಿಯನ್ನು 18 ಡಿಗ್ರಿಯಿಂದ 24 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಿ.
  •  ಎಸಿ ಆನ್ ಆಗಿರುವಾಗ ಇತರ ವಿದ್ಯುತ್ ಸಾಧನಗಳನ್ನು ಬಳಸಬೇಡಿ.
  • ಮುಖ್ಯವಾದ ವಿಷಯವೆಂದರೆ ಎಸಿ ಚಾಲನೆಯಲ್ಲಿರುವ ಕೊಠಡಿಯನ್ನು ಸರಿಯಾಗಿ ಮುಚ್ಚಬೇಕು. ಸೂರ್ಯನ ಕಿರಣಗಳು ಬಿದ್ದರೆ, ಅದು ಎಸಿ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ.
  • ಎಸಿ ನಿರಂತರವಾಗಿ ಓಡುವುದರಿಂದ ಸರ್ವೀಸ್ ಮಾಡಿಸಿ. ಇಲ್ಲವಾದರೆ ಕೊಠಡಿಯಲ್ಲಿನ ಗಾಳಿಯನ್ನು ತಂಪು ಮಾಡಲು ಎಸಿ ಕಷ್ಟಪಡಬೇಕಾಗುತ್ತದೆ.
  • ಕೊಠಡಿ ತಂಪಾಗುವವರೆಗೆ ಎಸಿ ಆನ್‌ ಮಾಡಿ, ನಂತರ ಆಫ್‌ ಮಾಡಿ ಹೀಗೆ ಮಾಡುವುದರಿಂದಲೂ ವಿದ್ಯುತ್‌ ಬಿಲ್‌ ಉಳಿಸಬಹುದು
  • ಕೊಠಡಿ ಕಿಟಕಿಗಳಿಗೆ ಗೋಣಿ ಚೀಲಗಳನ್ನು ನೆನೆಸಿ ಕಟ್ಟಿ ಇದರಿಂದ ಆಚೆಯ ಹಬೆ ಒಳಗೆ ಬರುವುದನ್ನು ತಡೆಯುತ್ತದೆ, ಎಸಿಯ ಅವಶ್ಯಕತೆ ಇರುವುದಿಲ್ಲ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!