ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆ ಎಷ್ಟೇ ಗಡಿಬಿಡಿ‌ಯಿಂದ‌ ಕೆಲಸ ಮಾಡಿದ್ರೂ‌ ಮುಗಿಯೋದಿಲ್ವ? ಗೃಹಿಣಿಯರೇ ನಿಮಗಾಗಿಯೇ ಈ ಸಿಂಪಲ್ ಟಿಪ್ಸ್

ಇದು ಎಲ್ಲಾ ಗೃಹಿಣಿಯರ ಕಥೆ.. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮನೆಕೆಲಸ, ಅಡುಗೆ, ಮಕ್ಕಳ ಕೆಲಸ ಹೀಗೆ ಒಂದಲ್ಲಾ ಒಂದು ಕೆಲಸದಿಂದ ಬ್ಯುಸಿಯಾಗಿಯೇ ಇರುತ್ತಾರೆ. ಸಮಯಸಿಕ್ಕರೆ ಎಲ್ಲೋ ಒಂದು ಗಂಟೆ ನಿದ್ದೆ… ಆದರೆ ಇವರ ಕೆಲಸ ಸುಲಭ ಮಾಡಿಸೋಕೆ ಇಲ್ಲಿದೆ ಕೆಲವು ಟಿಪ್ಸ್..

ರಾತ್ರಿ ಪಾತ್ರೆ:
ಆದಷ್ಟೂ ರಾತ್ರಿಯ ಪಾತ್ರೆಗಳನ್ನು ತೊಳೆಯದೆ ಒಣಗಿಸಬೇಡಿ. ಬೆಳಗಿನ ಕೆಲಸಗಳ ಮಧ್ಯೆ ಪಾತ್ರೆ ತೊಳೆಯೋಕೆ ಇಷ್ಟ ಆಗೋದಿಲ್ಲ. ಇದರಿಂದ ನಿಮ್ಮ ಬೆಳಗಿನ ಮೂಡ್ ಕೂಡ ಹಾಳಾಗುತ್ತದೆ.

ಮನೆ ಕೆಲಸ:
ಮನೆ ಕಸ ಗುಡಿಸಿ, ಒರೆಸೋದನ್ನ ಆದಷ್ಟು ಹಿಂದಿನ ದಿನ ಮಾಡಿಕೊಳ್ಳೋಕೆ ಪ್ರಯತ್ನಿಸಿ. ಇದರಿಂದ ಬೆಳಗ್ಗೆ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗುತ್ತದೆ.

ತರಕಾರಿ:
ಮರುದಿನ ಬೆಳಗಿನ ತಿಂಡಿ, ಅಡುಗೆಗೆ ಬೇಕಾದ ತರಕಾರಿಗಳನ್ನು ಹಿಂದಿನ ರಾತ್ರಿಯೇ ಕಟ್ ಮಾಡಿ ಫ್ರಿಡ್ಜ್ ನಲ್ಲಿಡಿ. ಇದು ನಿಮ್ಮ ಅಡುಗೆ ಕೆಲಸವನ್ನು ಸಲೀಸಾಗಿಸುತ್ತದೆ.

ಬಟ್ಟೆ:
ನೀವು ಬೆಳಗ್ಗೆ ತಯಾರಾಗಲು ಬೇಕಿರುವ ಬಟ್ಟೆ, ಮೇಕ್ ಅಪ್ ಐಟಮ್ಸ್ ಗಳನ್ನು ಸಿದ್ಧ ಪಡಿಸಿಕೊಳ್ಳುವುದು ಉತ್ತಮ.

ಮಗುವಿನ ಕಾಳಜಿ:
ಬೆಳಗ್ಗೆ ನಿಮ್ಮ ಕೆಲಸಗಳನ್ನು ಪ್ರಾರಂಭಿಸುವ ಮುನ್ನ ನಿಮ್ಮ ಪುಟ್ಟ ಮಗುವನ್ನು ಸಿಂಗಾರ ಮಾಡಿಬಿಡಿ. ಇಲ್ಲವಾದರೆ ದಿನದಲ್ಲಿ ಅವರ ಕಡೆ ಗಮನ ಹರಿಸೋದು ಕಷ್ಟವಾಗುತ್ತದೆ.

10ರೊಳಗೆ ಸಿದ್ಧರಾಗಿ:
ನಿಮ್ಮ ಕೆಲಸಗಳನ್ನು ಆದಷ್ಟು ಬೆಳಗ್ಗೆ 10 ರೊಳಗೆ ಮುಗಿಸಿಕೊಳ್ಳಿ. ಬಳಿಕ ನಿಮ್ಮ ಇತರೆ ಕೆಲಸಗಳಿಗೆ ಸಮಯ ಕೊಡುವುದಕ್ಕೆ ಸಹಕಾರಿಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss