Sunday, August 14, 2022

Latest Posts

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರಿದ ಟಿಎಂಸಿ ಸಚಿವ, ಶಾಸಕ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವು ವಾರಗಳು ಮಾತ್ರ ಬಾಕಿ ಉಳಿದಿದೆ. ಇತ್ತ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ಇದೀಗ ತೃಣಮೂಲ ಕಾಂಗ್ರೆಸ್​ನ ಇಬ್ಬರು ಮುಖಂಡರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್​​ನಲ್ಲಿ ಸಚಿವರಾಗಿದ್ದ ಬಚ್ಚು ಹನ್ಸಾಡ್​​ ಹಾಗೂ ಶಾಸಕ ಗೌರಿ ಶಂಕರ್​ ದತ್ತಾ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​​ ಘೋಷ್​ ಅವರ ಸಮ್ಮುಖದಲ್ಲಿ ಕಮಲ ಪಕ್ಷಕ್ಕೆ ಸೇರಿದರು.
ಇದರ ಜತೆಗೆ ಬೆಂಗಾಳಿ ನಟಿ ರಾಜಶ್ರೀ ರಾಜಬನ್ಸಿ ಹಾಗೂ ಬನ್ನಿ ಸೆನ್‌ಗುಪ್ತಾ, ಟಿಎಂಸಿ ಸಂಸದೆ ಪ್ರತೀಮಾ ಮಂಡನ್​ ಸಹೋದರಿ ಜಯಂತಿ ಕೂಡ ಬಿಜೆಪಿಯತ್ತ ಮುಖಮಾಡಿದ್ದಾರೆ.
​ಕಳೆದ ಕೆಲ ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್​ನ ಅನೇಕ ಶಾಸಕರು, ಸಚಿವರು ಬಿಜೆಪಿ ಸೇರಿಕೊಂಡಿದ್ದರು. ಇಲ್ಲಿಯವರೆಗೆ ಒಟ್ಟು 26 ಟಿಎಂಸಿ ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿ ಸೇರಿಕೊಂಡಿದ್ದು, ಇವರ ಜತೆಗೆ ಅನೇಕ ನಟ-ನಟಿಯರು ಹಾಗೂ ಕ್ರಿಕೆಟರ್ಸ್​ ಕೂಡ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss