ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರಿಗೆ ನಿನ್ನೆ ರಾತ್ರಿ ಬೆಳಗಾಗುವುದರೊಳಗೆ ದೊಡ್ಡದೊಂದು ಶಾಕ್ ಕಾದಿತ್ತು. ಅವರ ಟ್ವಿಟರ್ ಖಾತೆಯಿಂದ 80 ಸಾವಿರ ಫಾಲೋವರ್ಸ್ ಬೆಳಗಾಗುವುದರೊಳಗೆ ನಾಪತ್ತೆಯಾಗಿಬಿಟ್ಟಿದ್ದಾರೆ. ಅಂದರೆ ಕಡಿಮೆಯಾಗಿದ್ದಾರೆ. ಇದಕ್ಕಿದ್ದಂತೆಯೇ ಹೀಗೆ ಏನಾಯಿತು ಎಂದು ಅನುಪಮ್ ಖೇರ್ ಕಕ್ಕಾಬಿಕ್ಕಿಯಾಗಿದ್ದಾರೆ.
ಈ ಕುರಿತು ಅವರು ಟ್ವಿಟ್ಟರ್ ಇಂಡಿಯಾಗೆ ಪ್ರಶ್ನೆ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿಯೇ ಶೇರ್ ಮಾಡಿಕೊಂಡಿದ್ದಾರೆ. ಏಕೆ ಹೀಗಾಗಿದೆ ಎಂದು ಕೇಳಿದ್ದಾರೆ. ಇದು ತಾಂತ್ರಿಕ ತೊಂದರೆಯೋ ಅಥವಾ ಇನ್ನೇನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಅನುಪಮ್ ಖೇರ್, ‘ಪ್ರೀತಿಯ ಟ್ವಿಟ್ಟರ್ ಮತ್ತು ಟ್ವಿಟ್ಟರ್ ಇಂಡಿಯಾ, 80 ಸಾವಿರ ಫಾಲೋವರ್ಸ್ ಕಳೆದ 36 ಗಂಟೆಗಳಲ್ಲಿ ನನ್ನ ಖಾತೆಯಿಂದ ಕಣ್ಮರೆಯಾಗಿದ್ದಾರೆ. ಇದಕ್ಕೆ ಕಾರಣವೇನು। ನಿಮ್ಮ ಆಯಪ್ನಲ್ಲಿ ಏನಾದರೂ ತಾಂತ್ರಿಕ ದೋಷಗಳು ಇವೆಯೋ ಅಥವಾ ಇದರ ಹಿಂದೆ ಇನ್ನೇನಾದರೂ ಕಾರಣಗಳು ಇವೆಯೋ ಎಂದು ಪ್ರಶ್ನಿಸಿದ್ದಾರೆ. ಇದು ದೂರು ಅಲ್ಲ, ವಿಷಯ ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ. ಈ ಬಗ್ಗೆ ಏನು ಉತ್ತರ ಬರಲಿದೆಯೋ ಕಾದು ನೋಡಬೇಕಿದೆ.