Tuesday, June 28, 2022

Latest Posts

ಕನ್ಸರ್‌ವೆನ್ಸಿ ಒತ್ತುವರಿ ತೆರವುಗೊಳಿಸಲು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿತ್ರದುರ್ಗ:

ವಿ.ಪಿ. ಬಡಾವಣೆಯಲ್ಲಿ ಕನ್ಸರ್‌ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ. ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ನಗರದ ವಿ.ಪಿ. ಬಡಾವಣೆಯ ೩ನೇ ಕ್ರಾಸ್ (ಹಿಟ್ಟಿನ ಗಿರಣಿ ಹತ್ತಿರ) ಸಿ.ಸಿ. ರಸ್ತೆ, ಕಾಮಗಾರಿಗೆ ಚಾಲನೆ ನೀಡಿ ಅಕ್ಕಪಕ್ಕದಲ್ಲಿ ನಗರಸಭೆಯ ಜಾಗವನ್ನು ಪರಿಶೀಲಿಸಿದರು. ಕೆಲವರು ಕನ್ಸರ್‌ವೆನ್ಸಿ ಒತ್ತುವರಿ ಮಾಡಿ ಗೇಟ್ ಹಾಕಿದ್ದನ್ನು ಕಂಡು ಕೋಪಗೊಂಡ ಶಾಸಕರು, ಇದನ್ನು ಯಾರು ಮಾಡಿದ್ದು. ಇಲ್ಲಿ ನಗರಸಭೆಯ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿ ಮೆಟ್ಟಿಲುಗಳನ್ನು ಹಾಕಿದ್ದಾರೆ. ಈ ಬಗ್ಗೆ ಪೌರಾಯುಕ್ತರಿಗೆ ತಿಳಿಸಿ ಕೊಡಲೇ ತೆರವುಗೊಳಿಸುವಂತೆ ಸೂಚಿಸಿದರು.
ಜೆ.ಸಿ.ಆರ್. ಬಡಾವಣೆಯ ೨ನೇ ತಿರುವಿನಿಂದ ವಿ.ಪಿ. ಬಡಾವಣೆಗೆ ಬರುವ ದಾರಿಯ ಪಕ್ಕದಲ್ಲಿ ಇರುವ ಕನ್ಸರ್‌ವೆನ್ಸಿಗೆ ಅಡ್ಡಲಾಗಿ ಗೇಟ್ ಹಾಕಿದ್ದರಿಂದ ಇಲ್ಲಿ ಹಂದಿಗಳ ವಾಸ ಹೆಚ್ಚಾಗಿದೆ. ಇದರಿಂದ ನಗರದಲ್ಲಿ ರೋಗಗಳ ಹೆಚ್ಚಾಗುತ್ತಿದೆ. ಈಗಲೇ ಜನರು ಕೊರೋನಾದಿಂದ ನರಳುತ್ತಿದ್ದಾರೆ. ಇದರಲ್ಲಿ ಮತ್ತೊಂದು ರೋಗ ಬರುವುದು ಬೇಡ ಎಂದರು.
ಇದರ ಬಗ್ಗೆ ನಿಗಾವಹಿಸಿ ಕನ್ಸರ್ ವೆನ್ಸಿಗೆ ಅಡ್ಡ ಇರುವ ಗೇಟ್‌ನ್ನು ತೆರವು ಮಾಡಿ ಒತ್ತುವರಿ ಮಾಡಿರುವ ಬಗ್ಗೆ ಗಮನ ನೀಡಿ. ಹಾಗೇಯೇ ಕನ್ಸರ್ ವೆನ್ಸಿಯ ಅಕ್ಕಪಕ್ಕದಲ್ಲಿನ ಮನೆಯವರಿಗೆ ಈ ಜಾಗವನ್ನು ನೀಡಿ ಉಪಯೋಗ ಮಾಡಿಕೊಳ್ಳಲಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಗರಸಭಾ ಸದಸ್ಯರಿಗೆ ಸೂಚನೆ ನೀಡಿದರು.
ಇದೇ ಸಮಯದಲ್ಲಿ ಅಲ್ಲೇ ಇದ್ದ ಸರ್ಕಾರದ ಸಹಾಯಕ ಔಷಧಿ ನಿಯಂತ್ರಣ ಕಚೇರಿಗೆ ಸಮಯವಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿ ಬಾರದೆ ಇದಿದ್ದರಿಂದ ಶಾಸಕರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಬಂದು ಕೆಲಸವನ್ನು ಮಾಡಬೇಕು ಮನಸ್ಸಿಗೆ ಬಂದಂತೆ ವರ್ತಿಸುವುದು ಸರಿಯಲ್ಲ ಎಂದು ತಾಕೀತು ಮಾಡಿದರು.
ನಗರಸಭಾ ಸದಸ್ಯರಾದ ರೋಹಿಣಿ ನವೀನ್, ಮುಖಂಡರಾದ ರವಿಕುಮಾರ್, ವೇದ ಪ್ರಕಾಶ್, ಕುಮಾರ್, ತಿಮ್ಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss