MUST READ | ಈ ದೇವಿ ದರುಶನ ಪಡೆಯಲು ಗಂಡಸರು ಹೆಂಗಸರಂತೆ ವೇಷ ಧರಿಸಬೇಕು, ಷೋಡಶ ಅಲಂಕಾರವೂ ಮಾಡಿಕೊಳ್ಳಬೇಕು!

-ಮೇಘನಾ ಶೆಟ್ಟಿ, ಶಿವಮೊಗ್ಗ

ನಮ್ಮಲ್ಲಿ ಎಷ್ಟೋ ಕಡೆ ಈಗಲೂ ಮಹಿಳೆಯರಿಗೆ ದೇಗುಲಗಳಿಗೆ ಪ್ರವೇಶವಿಲ್ಲ. ಅದರಲ್ಲೂ ಗರ್ಭಗುಡಿಗೆ ಅವರು ಹೋಗೋದು ಅಸಾಧ್ಯವೇ ಸರಿ. ಆದರೆ ಇಲ್ಲೊಂದು ದೇವಾಲಯ ಇದೆ, ಇಲ್ಲಿ ಗಂಡಸರಿಗೆ ಪ್ರವೇಶ ನಿಷೇಧಿಸಿದೆ. ಅದಾಗ್ಯೂ ದೇವಿಯ ದರುಶನ ಪಡೆಯಬೇಕೆಂದರೆ ಅವರು ಮಹಿಳೆಯ ರೀತಿ ಅಲಂಕಾರ ಮಾಡಿಕೊಳ್ಳಬೇಕಿದೆ. ಬಟ್ಟೆಗಳನ್ನು ಧರಿಸಬೇಕಿದೆ. ಯಾವುದೀ ದೇವಾಲಯ? ಯಾಕೆ ಹೀಗೆ ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ..

After two years, Chamayavilakku shines bright again - The Hinduಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಂಕುಳಂಗರ ದೇವಿ ದೇವಾಲಯಕ್ಕೆ ಪುರುಷರು ಪುರುಷರಂತೆ ಪ್ರವೇಶ ಪಡೆಯುವುದಕ್ಕೆ ನಿಷೇಧವಿದೆ. ದೇವಾಲಯದಲ್ಲಿ ಮಹಿಳೆಯರಿಗೆ ಹಾಗೂ ನಪುಂಸಕರಿಗೆ ಮಾತ್ರ ಪ್ರವೇಶ. ಹೀಗಿದ್ದೂ ಪ್ರವೇಶಿಸಬೇಕೆಂದರೆ ಪುರುಷರು ಮಹಿಳೆಯರ ರೀತಿ ಬಟ್ಟೆ ಹಾಕಬೇಕು, ಬರೀ ಬಟ್ಟೆ ಹಾಕಿದರೆ ಸಾಲದು 16  ರೀತಿಯ ಷೋಡಶ ಅಲಂಕಾರಗಳನ್ನು ಮಾಡಿಕೊಂಡು ಒಳಬರಬೇಕು.

Weird Temple Where Thousands of Men Dress Up as Women To offer Prayers -  lifeberrys.comಇತಿಹಾಸ ಏನು?
ಸ್ಥಳೀಯ ದಂತಕೆತಗಳ ಪ್ರಕಾರ ಪ್ರಾಣಿಗಳನ್ನು ಮೇಯಿಸುತ್ತಿದ್ದ ಜನರು ಕಾಡಿನಲ್ಲಿ ಕಲ್ಲೊಂದರ ಮೇಲೆ ತೆಂಗಿನಕಾಯಿ ಒಡೆಯಲು ಯತ್ನಿಸಿದರು. ಆ ವೇಳೆ ಕಲ್ಲಿನಿಂದ ಕೆಂಪು ದ್ರವ್ಯ ಹರಿದುಬಂತು. ಭಯಭೀತರಾದ ಜನರು ಸ್ವಾಮೀಜಿಗಳ ಬಳಿ ಸಂದರ್ಭವನ್ನು ವಿವರಿಸಿದರು. ಸ್ವಾಮೀಜಿ ಅದು ಕಲ್ಲಲ್ಲ ವನದುರ್ಗಾ ತಾಯಿ ಎಂದು ಹೇಳಿದರು. ಆಕೆಯನ್ನು ಪೂಜಿಸುವಂತೆ ಹೇಳಿದ್ದೇ ಜನರು ತಮಗೆ ಆದ ವಸ್ತುಗಳಿಂದ ದೇವಾಲಯ ಕಟ್ಟಿ ಪೂಜಿಸತೊಡಗಿದರು. ಅಲ್ಲಿದ್ದ ಪುರುಷರೆಲ್ಲ ಸ್ತ್ರೀ ಬಟ್ಟೆ ತೊಟ್ಟು ಪೂಜಿಸಿದರು. ಈ ಪದ್ಧತಿ ಇಂದಿಗೂ ನಡೆದುಕೊಂಡೇ ಬಂದಿದೆ.

Kottankulangara Chamayavilakku 2020 in India, photos, Fair,Festival when is  Kottankulangara Chamayavilakku 2020 - HelloTravelಅಲಂಕಾರ ಕಡ್ಡಾಯ
ಮಕ್ಕಳು, ವೃದ್ಧರಿಗೂ ಇಲ್ಲಿ ಯಾವುದೇ ಅವಕಾಶ ಇಲ್ಲ. ಎಲ್ಲರೂ ಸ್ತ್ರೀ ಬಟ್ಟೆ ಧರಿಸಿ 16 ರೀತಿಯ ಮೇಕಪ್ ಅಲಂಕಾರ ಮಾಡಿಕೊಳ್ಳಲೇಬೇಕು. ಸುಂದರ ಸ್ತ್ರೀ ರೂಪ ಪಡೆದ ನಂತರ ದೇವಾಲಯದ ಒಳಗೆ ಅವರನ್ನು ಬಿಡಲಾಗುತ್ತದೆ.

chamayavilakkuಗರ್ಭಗುಡಿಗೆ ಛಾವಣಿ ಇಲ್ಲ
ಈ ದೇವಿ ತಾನೇ ಉದ್ಭವವಾದ ಜಾಗ ಇದಾಗಿರುವುದರಿಂದ ಇಲ್ಲಿ ಛಾವಣಿ ಇಲ್ಲ, ಛಾವಣಿ ಕಟ್ಟುವುದು ಅಶುಭ ಎಂದು ಹಿರಿಯರು ನಂಬುತ್ತಾರೆ.

Kottankulangara Devi Temple - Wikipediaದೇವಾಲಯದಲ್ಲಿಯೇ ಮೇಕಪ್ ರೂಂ
ಯಾವ ದೇವಾಲಯದಲ್ಲಿ ಮೇಕಪ್ ಮಾಡಿಸಿಕೊಳ್ಳಲು ರೂಂ ಇರುತ್ತದೆ ಹೇಳಿ? ಇಲ್ಲಿ ಪುರುಷರು ಬಂದು ಕುಳಿತು ಅಲಂಕಾರಗೊಳ್ಳಬಹುದು. ಸಹೋದರಿ, ಪತ್ನಿ, ತಾಯಿ ಹೀಗೆ ಯಾರದ್ದಾದರೂ ಸಹಾಯ ಪಡೆದು ತಯಾರಾಗಬಹುದು. ಸಂಪೂರ್ಣವಾಗಿ 16 ಬಗೆಯ ಅಲಂಕಾರ ಮಾಡಿಕೊಂಡ ನಂತರ ಅವರನ್ನು ಒಳಗೆ ಬಿಡಲಾಗುತ್ತದೆ.

Chamayavilakkuವರ್ಷಕ್ಕೊಮ್ಮ ಉತ್ಸವ
ಈ ದೇವಿಗೆ ಪ್ರತಿ ವರ್ಷ ಎರಡು ದಿನಗಳ ಚಾಮ್ಯವಿಳಕ್ಕು ಉತ್ಸವ ನೆರವೇರಿಸಲಾಗುತ್ತದೆ. ಈ ಉತ್ಸವದಲ್ಲಿ ಹೆಣ್ಣಿನ ವೇಶ ತೊಟ್ಟು ಪೂಜಿಸುವ ಗಂಡಸಿಗೆ ಉತ್ತಮ ಉದ್ಯೋಗ ಹಾಗೂ ಸುಂದರ ಪತ್ನಿ ಪ್ರಾಪ್ತಿಯಾಗುತ್ತಾಳೆ ಎನ್ನುವ ನಂಬಿಕೆ ಇದೆ. ಈ ಪದ್ಧತಿ ದೇಶ ವಿದೇಶಗಳಿಗೂ ಹರಡಿದ್ದು, ವಿದೇಶಿಗರು ಮೇಕಪ್ ಹಾಗಿ ಸ್ತ್ರೀ ವೇಷ ತೊಟ್ಟು ದೇವಿಯನ್ನು ಪೂಜಿಸುತ್ತಾರೆ.

Chamayavilakku

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!