Friday, August 12, 2022

Latest Posts

ಅನ್ಯ ರಾಷ್ಟ್ರಗಳ ಬೆದರಿಸಲು ಆಫ್ಘನ್ ನೆಲ ದುರ್ಬಳಕೆ ವಿರುದ್ಧ ವಿಶ್ವಸಂಸ್ಥೆ ಎಚ್ಚರಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಯಾವುದೇ ರಾಷ್ಟ್ರವನ್ನು ಬೆದರಿಸಲು ಅಫಘಾನಿಸ್ಥಾನದ ನೆಲ ದುರ್ಬಳಕೆಯಾಗಕೂಡದು, ಆ ರಾಷ್ಟ್ರ ಉಗ್ರರ ಆಡುಂಬೊಲವೂ ಆಗಕೂಡದೆಂಬ ಎಚ್ಚರಿಕೆಯುಕ್ತ ಅತ್ಯುಗ್ರ ನಿರ್ಣಯವನ್ನು ಭಾರತದ ಅಧ್ಯಕ್ಷತೆ ಹೊಂದಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದೆ.
ಅಫಘಾನೀಯರು ಮತ್ತು ವಿದೇಶೀಯರು ಅಫ್ಘಾನ್‌ನಿಂದ ಸುರಕ್ಷಿತವಾಗಿ ತೆರಳಲು ಅನುವು ಮಾಡುವುದು ತಾಲಿಬಾನ್ ಕರ್ತವ್ಯ ಮತ್ತು ತಾಲಿಬಾನ್ ಇದಕ್ಕೆ ಖಂಡಿತ ಬದ್ಧವಾಗಿರುತ್ತದೆಂದು ನಾವು ನಿರೀಕ್ಷಿಸಿದ್ದೇವೆಂದು ನಿರ್ಣಯದಲ್ಲಿ ಹೇಳಲಾಗಿದೆ.
ಅಫಘಾನಿಸ್ಥಾನದ ಸಾರ್ವಭೌಮತೆ, ಸ್ವಾತಂತ್ರ್ಯ, ಪ್ರಾದೇಶಿಕ ಸಮಗ್ರತೆ, ರಾಷ್ಟ್ರೀಯ ಏಕತೆಗೆ ವಿಶ್ವಸಂಸ್ಥೆಯ ಬಲವಾದ ಕಟಿಬದ್ಧತೆಯನ್ನು ನಿರ್ಣಯದಲ್ಲಿ ಪುನರುಚ್ಚರಿಸಲಾಗಿದೆ. ಆ.26 ರಂದು 28 ಮಿಲಿಟರಿ ಸಿಬ್ಬಂದಿಗಳು ಮತ್ತು 300 ನಾಗರಿಕರನ್ನು ಬಲಿ ತೆಗೆದುಕೊಂಡ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ , ಐಸಿಸ್-ಕೆ ಹೊಣೆ ಹೊತ್ತ ಅವಳಿ ಬಾಂಬ್ ದಾಳಿ ಕೃತ್ಯವನ್ನು ನಿರ್ಣಯದಲ್ಲಿ ಅತ್ಯುಗ್ರವಾಗಿ ಖಂಡಿಸಲಾಗಿದೆ.
ಭಯೋತ್ಪಾದನೆ ಪಿಡುಗಿನ ವಿರುದ್ಧ ಕಳವಳ
ಸೆ.16,17ರ ಶಾಂಘೈ ಸಹಕಾರ ಸಂಘ ಸಭೆಯಲ್ಲಿ, ಭಯೋತ್ಪಾದನೆ ಪಿಡುಗಿನ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಮಕ್ಷಮದಲ್ಲೇ ಭಾಷಣ ಮಾಡಲಿದ್ದಾರೆ.
ಮೋದಿಯವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಶಾಂಬೆಗೆ ತೆರಳುವುದಿಲ್ಲ. ಬದಲಾಗಿ ವರ್ಚ್ವಲ್ ಆಗಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ವರ್ಚ್ವಲ್ ಭಾಷಣ ಮಾಡಲಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್‌ಖಾನ್, ರಷ್ಯಾ ಅಧ್ಯಕ್ಷ ಪುತಿನ್, ಮಧ್ಯ ಏಷ್ಯಾ ರಾಷ್ಟ್ರಗಳ ನಾಯಕರು ಶೃಂಗಸಭೆಗೆ ನೇರ ಹಾಜರಾಗೋ ಸಾಧ್ಯತೆ ಇದೆ.
ಎಸ್‌ಸಿಒ ಸಂಘದ ಅಧ್ಯಕ್ಷ ಸ್ಥಾನವನ್ನು ತಜಕಿಸ್ಥಾನ ಹೊಂದಿದೆ. ಮಿಕ್ಕಂತೆ ಇದು ಎಂಟು ಸದಸ್ಯ ರಾಷ್ಟ್ರಗಳ ಕೂಟ. ರಷ್ಯಾ, ಚೀನಾ, ಭಾರತ, ಪಾಕಿಸ್ಥಾನ, ನಾಲ್ಕು ಮಧ್ಯ ಏಷ್ಯಾ ರಾಷ್ಟ್ರಗಳು, ತಜಕಿಸ್ಥಾನ, ಉಜ್‌ಬೆಕಿಸ್ಥಾನ್, ಕಜಕಿಸ್ಥಾನ್, ಕಿರ್ಗಿಸ್ಥಾನ್ ಇವು ಸಂಘದ ಸದಸ್ಯ ರಾಷ್ಟ್ರಗಳು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss