ಹೊಸ ದಿಗಂತ ವರದಿ, ಕೊಪ್ಪಳ:
ಕೊಪ್ಪಳ ಜಿಲ್ಲೆಗೆ ಬಿಎಸ್ಸಿ ನರ್ಸಿಂಗ್ ಕಾಲೇಜು ಮಂಜೂರಾಗಿದ್ದು ವೈಧ್ಯಕಿಯ ವಿಜ್ಞಾನಗಳ ಸಂಸ್ಥೆ ಇನ್ಸಿಟೂಟ್ ಆಫ್ ನರ್ಸಿಂಗ್ ಸೈನ್ಸ್ಸ್ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿಯೇ ಬಿಎಸ್ಸಿ ನರ್ಸಿಂಗ್ ಕೊರ್ಸ್ ಆರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕೊಪ್ಪಳ ಕಿಮ್ಸ್ನಲ್ಲಿ ವಿದ್ಯಾರ್ಥಿನಿಯರಿಗಾಗಿ ಕಿರಿಯ ಆರೋಗ್ಯ ತರಬೇತಿ ಕೋರ್ಸ್ (ಎಎನ್ಎಮ್) ಮಾತ್ರ ಇದ್ದು, ಈಗ ಜಿಲ್ಲೆಯಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜನ್ನು ಮಂಜೂರಾಗಿದ್ದು, ದೊರೆತಿರುವುದು ಸಂತಸದ ಸಂಗತಿ. ಸಿಎಂ ಹಾಗೂ ಆರೋಗ್ಯ ಸಚಿವರಿಗೂ ಅಭಿನಂದನೆ ಸಲ್ಲಿಸುವೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರಂತರ ಪ್ರಯತ್ನದಿಂದ ಜಿಲ್ಲೆಗೆ ಕಾಲೇಜು ಮಂಜೂರಾಗಿದೆ. ಈ ಕೋರ್ಸ್ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಒಟ್ಟುಗೂಡಿ 100ಸಿಟುಗಳ ಪ್ರವೇಶ ಪಡೆಯಲು ಅವಕಾಶವಿದೆ. ಆದರೆ ಪ್ರಸಕ್ತ ಶೈಕ್ಷಣಿಕ ರ್ವದಲ್ಲಿಯೇ ಈ ಕೋರ್ಸ್ನ್ನು ಆರಂಬಿಸಲಾಗುವುದು ಎಂದರು.
ಅದರಂತೆ ದಾರಿಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಬಾರದು ಎಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕ ಯೋಜನೆಯಡಿ ಅನುದಾನದಲ್ಲಿ 51 ಲಕ್ಷ ವೆಚ್ಚದ ಅಡ್ವಾನ್ಸ್ ಲೈಪ್ ಸಫೋರ್ಟ್(ಎಎಲ್ಎಸ್) ಅಂಬೂಲೇನ್ಸ್ ಕೂಡ ಮಂಜುರಾಗಿದೆ. ಇದರಲ್ಲಿ ವೇಂಟಿಲೇಟರ್ ಸೇರಿದಂತೆ ಎಲ್ಲಾ ಸೌಲಭ್ಯ ಒಳಗೊಂಡಿದೆ ಎಂದು ಹೇಳಿದರು.
ಬಜೆಟ್ ನೀರೀಕ್ಷೆ:
ಜಿಲ್ಲೆಯಲ್ಲಿ ನವಲಿ ಜಲಾಶಯ ನಿರ್ಮಿಸುವ ಕುರಿತಂತೆ ಸಿಎಂಗೆ ಮನವಿ ಮಾಡಿದ್ದೆವು. ಅವರು ಈಚೆಗೆ ಅಧಿಕಾರಿಗಳ ಹಾಗೂ ಈ ಭಾಗದ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಸಿದ್ದಾರೆ. ಬಜೆಟ್ನಲ್ಲಿ ನವಲಿ ಡ್ಯಾಂ ಬಗ್ಗೆ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ ಈ ಬಜೆಟ್ನಲ್ಲಿ 100 ಕೋಟಿ ರೂ. ಮೀಸಲಿಡಬೇಕೆಂದು ಸಿಎಂ ಅವರನ್ನ ಕೇಳಿಕೊಂಡಿದ್ದೇವೆ.
ಇನ್ನೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಜಿಲ್ಲೆಗೆ ಬೇಕಾಗಿದೆ. ಇದನ್ನೂ ನೀಡುವಂತೆ ಜಿಲ್ಲೆಯ ಪರವಾಗಿ ಸಿಎಂ ಅವರನ್ನು ಕೇಳಿಕೊಂಡಿದ್ದೇವೆ. ಈ ಬಜೆಟ್ನಲ್ಲಿ ಅವುಗಳ ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ ಎಂದರು.
ಕೃಷ್ಣಾ ಬಿ ಸ್ಕೀಂ ಯೋಜನೆಯು ಪ್ರಗತಿಯಲ್ಲಿದೆ. ಆಲಮಟ್ಟಿಯ ಗೇಟ್ ಎತ್ತರಿಸುವ ಕೆಲಸ ನಡೆಯಬೇಕಿದೆ. ಈ ಯೋಜನೆಗೆ ಭೂ ಸ್ವಾಧೀನ ಸೇರಿ 50 ಸಾವಿರ ಕೋಟಿ ರೂ. ಬೇಕಾಗಿದೆ. ಯೋಜನೆಗೆ ಸಂಬಂಧಿಸಿದ ಎಲ್ಲ ಸಂಸದರೂ ಚರ್ಚೆ ಮಾಡಿದ್ದೇವೆ. ಕೇಂದ್ರ ಜಲಸಂಪನ್ಮೂಲ ಸಚಿವರನ್ನ ಭೇಟಿ ಮಾಡಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಮನವಿ ಮಾಡಿದ್ದೇವೆ. ಎಂದು ಹೇಳಿದರು.