Tuesday, June 28, 2022

Latest Posts

ವಿಜಯದಶಮಿ ದಿನದಂದು ಮೈಸೂರು ಮೃಗಾಲಯಕ್ಕೆ ಬಂಪರ್ ಆದಾಯ

ಹೊಸ ದಿಗಂತ ವರದಿ, ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನವಾದ ವಿಜಯದಶಮಿ ದಿನದಂದು ನಡೆದ ಜಂಬೂಸವಾರಿ ಮೆರವಣಿಗೆಯನ್ನು ನೋಡಲೆಂದು ಅರಮನೆ ನಗರಿ ಮೈಸೂರಿಗೆ ಅಪಾರ ಜನಸ್ತೋಮ ಬಂದಿತ್ತು. ಆದರೆ ಜಂಬೂಸವಾರಿಯನ್ನು ನೋಡಲಾಗಲಿಲ್ಲ. ನಿರಾಶರಾದ ಜನ ಮೈಸೂರು ಮೃಗಾಲಯವನ್ನು ನೋಡಲು ಮುಗಿ ಬಿದ್ದರು. ಇದರ ಪರಿಣಾಮ ಮೃಗಾಲಯಕ್ಕೆ ಒಂದೇ ದಿನ ಬಂಪರ್ ಆದಾಯ ದೊರೆತಿದೆ. ಅಂದು ಮೈಸೂರಿಗೆ ಬಂದಿದ್ದ ಜನರಲ್ಲಿ ಬರೋ ಬರೀ 27 ಸಾವಿರಕ್ಕೂ ಅಧಿಕ ಮಂದಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದು, ಇದರಿಂದ 26.67 ಲಕ್ಷ ರೂ. ಆದಾಯ ಸಂಗ್ರಹ ಆಗಿದೆ.
ಇದು ಕಳೆದ ನಾಲ್ಕು ವರ್ಷದಲ್ಲಿ ಸಂಗ್ರಹವಾದ ಅಧಿಕ ಆದಾಯ ಎನ್ನಿಸಿಕೊಂಡಿದೆ.
ಜAಬೂ ಸವಾರಿಯ ದಿನದವಾದ ಶುಕ್ರವಾರ 27,093 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, 26,67,880 ರೂ. ಆದಾಯ ಸಂಗ್ರಹವಾಗಿದೆ. ಇನ್ನೂ ಆಯುಧ ಪೂಜೆಯ ದಿನದಂದು 9,033 ಮಂದಿ ಭೇಟಿ ನೀಡಿದ್ದು, 9.29 ಲಕ್ಷ ರೂ . ಸಂಗ್ರಹವಾಗಿದೆ.
ಇನ್ನೂ ಈ ಬಾರಿ ದಸರಾ ಸಂದರ್ಭದ ಹತ್ತು ದಿನಗಳ ಅವಧಿಯಲ್ಲಿಮೃಗಾಲಯಕ್ಕೆ 75 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಈ ಮೂಲಕ 77.63 ಲಕ್ಷ ರೂ. ಆದಾಯ ಗಳಿಸಿದೆ.
2018ರ ದಸರಾ ಸಂದರ್ಭ ಹತ್ತು ದಿನದ ಅವಧಿಯಲ್ಲಿ1.53 ಲಕ್ಷ ಮಂದಿ ಭೇಟಿ ನೀಡಿದ್ದರು. 105.64 ಲಕ್ಷ ರೂ. ಆದಾಯ, 2019ರ ದಸರಾ ಸಂದರ್ಭದಲ್ಲಿ1.65 ಲಕ್ಷ ಮಂದಿ ಭೇಟಿ, 159.76 ಲಕ್ಷ ರೂ. ಸಂಗ್ರಹ ಆಗಿತ್ತು. ಕೋವಿಡ್ ನಿಂದ ಸರಳವಾಗಿ ನಡೆದ 2020ರ ದಸರಾ ಸಂದರ್ಭದಲ್ಲಿ 20 ಸಾವಿರ ಮಂದಿ ಭೇಟಿ ನೀಡಿ, 19.56 ಲಕ್ಷ ರೂ. ಸಂಗ್ರಹವಾಗಿತ್ತು.
2018ರ ಆಯುಧ ಪೂಜೆ ದಿನದಂದು 22,398 ಮಂದಿ ಭೇಟಿ ನೀಡಿದ್ದರು. 17.74 ಲಕ್ಷ ರೂ . ಆದಾಯ, ವಿಜಯ ದಶಮಿ ದಿನದಂದು 32,301 ಮಂದಿ, 25.40 ಲಕ್ಷ ರೂ., 2019ರ ಆಯುಧ ಪೂಜೆ ದಿನದಂದು 30, 273 ಮಂದಿ ಭೇಟಿ ನೀಡಿದ್ದರು. 29,77 ಲಕ್ಷ ರೂ., ವಿಜಯ ದಶಮಿ ದಿನದಂದು 28,389 ಮಂದಿ ಭೇಟಿ ನೀಡಿ, 28.28 ಲಕ್ಷ ರೂ. ಆದಾಯ ಬಂದಿತ್ತು. 2020ರ ಆಯುಧ ಪೂಜೆ ದಿನದಂದು 3,534 ಮಂದಿ ಭೇಟಿ ನೀಡಿದ್ದು, 3.54 ಲಕ್ಷ ರೂ., ವಿಜಯ ದಶಮಿಯಂದು 7,264 ಮಂದಿ ಭೇಟಿ ನೀಡಿದ್ದರು. 7.33 ಲಕ್ಷ ರೂ. ಆದಾಯ ಸಂಗ್ರಹ ವಾಗಿತ್ತು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss