ಅತ್ಯಾಚಾರಕ್ಕೆ ಯತ್ನಿಸಿ, ಯುವತಿಯನ್ನು ಟ್ರೈನ್​​ನಿಂದಲೇ ಹೊರ ಎಸೆದ ಕಾಮುಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಛತ್ತರ್​​ಪುರದಿಂದ ಉತ್ತರ ಪ್ರದೇಶದ ಬಂಡಾ ಜಿಲ್ಲೆಗೆ ರೈಲಿನಲ್ಲಿ ಆಗಮಿಸುತ್ತಿದ್ದ ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದು, ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯನ್ನು ರೈಲಿನಿಂದ ಹೊರ ಎಸೆದಿರುವ ಘಟನೆ ಮಧ್ಯಪ್ರದೇಶಧ ರಾಜ್​ನಗರದ ಬಳಿ ನಡೆದಿದೆ.
ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಖಜುರಾಹೊ-ಮಹೋಬಾ ಪ್ಯಾಸೆಂಜರ್​ ರೈಲಿನಲ್ಲಿ 25 ವರ್ಷದ ಅವಿವಾಹಿತ ಯುವತಿ ಪ್ರಯಾಣ ಮಾಡಿದ್ದು, ಆಕೆಯ ಪಕ್ಕದಲ್ಲೇ ಕುಳಿತುಕೊಂಡಿದ್ದ ವ್ಯಕ್ತಿ ಆಕೆಗೆ ನಿಂದಿಸಿ, ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋದಿಸಿದ ಯುವತಿಯ್ನನು ಚಲಿಸುವ ರೈಲಿನಿಂದ ಹೊರಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!