ಹೊಸ ದಿಗಂತ ವರದಿ, ಕಲಬುರಗಿ:
27ರಂದು ನಡೆಯಲಿರುವ ಕಲಬುರಗಿ ಬಂದ್,ಗೆ ರೈತರು,ಕಾರ್ಮಿಕರು ಹಾಗೂ ಮಹಿಳಾ ಸಂಘಟನೆ ಸೇರಿದಂತೆ 18ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಲಿದ್ದಾರೆ ಎಂದು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರೈತರ ಚಳುವಳಿ ಪ್ರಾರಂಬವಾಗಿ 10 ತಿಂಗಳು ಮುಗಿಯುತ್ತಿವೆ. ರೈತರು ಲಕ್ಷಾಂತರ ಸಂಖ್ಯೆಯಲ್ಲಿ ದಿಹಲಿಯ ಗಡಿ ಭಾಗದಲ್ಲಿ ಮನೆ,ಮಕ್ಕಳು ಬಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. 27ರಂದು ಮೂರು ಕೃಷಿ ಕಾಯದೆಗಳನ್ನು ಹಿಂಪಡೆಯಲು ಆಗ್ರಹಿಸಿ ವ್ಯವಸ್ಥಿತವಾಗಿ ಬಂದ್ ಮಾಡಲಾಗುತ್ತಿದೆ. ಕೇಂದ್ರ ಮೋದಿ ಸರ್ಕಾರ ರೈತರ, ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಮೇಲೆ ಘದಾ ಪ್ರಹಾರ ಮಾಡತ್ತಿದೆ ಎಂದರು.
ನಗರದ ಕೇಂದ್ರ ಬಸ್ ನಿಲ್ದಾಣ, ಆಳಂದ ರಸ್ತೆ, ಹುಮನಾಬಾದ್ ರಸ್ತೆ, ಸೇಡಂ ರಸ್ತೆ, ಶಹಾಬಾದ ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಮೂಲಕ ನಮ್ಮ ಪ್ರಮುಖರು ವ್ಯವಸ್ಥಿತವಾಗಿ ಬಂದ್ ಮಾಡಿ, ನಾಕಾ ಬಂದಿ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರ ಜೊತೆ ಸಭೆಗಳನ್ನು 27ರಂದು ಕಲಬುರಗಿ ಬಂದ್ ಯಶಸ್ವಿ ಮಾಡಲಾಗುವುದು ಎಂದರು.
ದೇಶದಲ್ಲಿ ಮೋದಿ ಅಲೆ ದಿನೇ ದಿನೇ ಕಡಿಮೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ನೆಲಕಚ್ಚಲಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಖುದ್ದು ಬಿ.ಎಸ್.ಯಡಿಯೂರಪ್ಪನವರೆ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಎಂದರು. ದೆಹಲಿಯ ಈ ಹೋರಾಟವನ್ನು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜಕೀಯ ಪ್ರೇರಿತ ಎಂದು ಹೆಸರು ನೀಡಿದ್ದಾರೆ. ಈ ಹೇಳಿಕೆ ಯಾವ ರೀತಿ ಇದೆ ಎನ್ನುವುದು ಎದ್ದು ತೋರಿಸುತ್ತದೆ ಎಂದರು. ಹೀಗಾಗಿ ಎಲ್ಲ ಸಾರ್ವಜನಿಕರು 27ರ ಬಂದ,ಗೆ ಬೆಂಬಲಿಸಬೇಕೆಂದು ವಿನಂತಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಶೋಕ ಘೂಳಿ ಇದ್ದರು.