ಹೊಸ ದಿಗಂತ್ ಆನ್ ಲೈನ್ ಡೆಸ್ಕ್:
ವಿಶ್ವದ ಎರಡನೇ ಅತ್ಯಕ ಸಾಂಕ್ರಾಮಿಕ ಸಾವಿನ ಸಂಖ್ಯೆಯನ್ನು ದಾಖಲಿಸಿರುವ ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ 3,459 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಆ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 3, 61,884 ಕ್ಕೆ ಏರಿಕೆಯಾಗಿದೆ ಎಂದು ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದೇ ಅವಯಲ್ಲಿ ದೃಢಪಡಿಸಿದ ಸೋಂಕು ಪ್ರಕರಣಗಳ ಸಂಖ್ಯೆ 73,513 ರಿಂದ 1,36,73,507 ಕ್ಕೆ ಏರಿಕೆಯಾಗಿದೆ. ಅಮೆರಿಕದ ಬಳಿಕ ಬ್ರೆಜಿಲ್ ವಿಶ್ವದ ಎರಡನೇ ಅತ್ಯಕ ಸಾಂಕ್ರಾಮಿಕ ಸಾವಿನ ಸಂಖ್ಯೆಯನ್ನು ದಾಖಲು ಮಾಡಿದ ರಾಷ್ಟ್ರವಾಗಿದೆ.