ಹೊಸ ದಿಗಂತ ವರದಿ, ಧಾರವಾಡ:
ಆಕಳು ಮೈತೊಳೆಯಲು ಹೋದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಮನಗುಂಡಿ ಗ್ರಾಮದಲ್ಲಿ
ಭಾನುವಾರ ನಡೆದಿದೆ. ಗ್ರಾಮದ ಚನ್ನವೀರಯ್ಯ ಚಿಕ್ಕಮಠ(17) ಮೃತಪಟ್ಟ ಬಾಲಕ. ಆಕಳಿನ ಮೈತೊಳೆಯಲು ಊರಿನ ಹತ್ತಿರದ ಕೆರೆ ತೆರಳಿದ್ದ ಚನ್ನವೀರಯ್ಯ ಕಾಲು ಜಾರಿ ಕೆರೆಯಲ್ಲಿ ಮುಳಗಿ, ಈಜು ಬಾರದೆ ಸಾವನ್ನಪಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.