ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸವಾರನ ತಲೆಗೆ ಕಲ್ಲಿನಿಂದ ಹೊಡೆದು ಹಣ ದೋಚಿದ ಪ್ರಕರಣ: ಮೂವರು ಆರೋಪಿಗಳ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ದಾವಣಗೆರೆ:

ಬೈಕ್ ಹಿಂಬಾಲಿಸಿಕೊಂಡು ಬಂದು ಸವಾರನ ತಲೆಗೆ ಕಲ್ಲಿನಿಂದ ಹೊಡೆದು ಹಣ, ಮೊಬೈಲ್ ಕಸಿದುಕೊಂಡು ಹೋಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 9 ಸಾವಿರ ರೂ. ಮೌಲ್ಯದ ಮೊಬೈಲ್, 3550 ರೂ. ನಗದು, ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ಜಪ್ತು ಮಾಡಿದ್ದಾರೆ.
ಇಲ್ಲಿನ ಎಸ್ಸೆಸ್ಸೆಂ ನಗರ ಬಿ-ಬ್ಲಾಕ್ ನಿವಾಸಿಗಳಾದ ಜಿಶಾನ್(20 ವರ್ಷ), ಅಬ್ದುಲ್ ಅಫ್ತಾಬ್(20) ಹಾಗೂ ಜಬೀವುಲ್ಲಾ(19) ಬಂಧಿತ ಆರೋಪಿಗಳು. ತಾಲೂಕಿನ ಚಿಕ್ಕಬೂದಿಹಾಳ್  ಗ್ರಾಮದ ರೇವಣಸಿದ್ದಪ್ಪ ಎಂಬುವರು ಬೂಸನಹಹಟ್ಟಿ ರಸ್ತೆಯಲ್ಲಿ ಜು.10ರಂದು ರಾತ್ರಿ 8ರ ಸುಮಾರಿಗೆ ಹೋಗುವಾಗ ಆರೋಪಿಗಳು ಬೈಕ್‌ನಲ್ಲಿ ಬೆನ್ನು ಹತ್ತಿ ಬಂದಿದ್ದರು.
ರೇವಣಸಿದ್ದಪ್ಪನವರ ಬೈಕ್ ತಡೆದು, ಏ ಯಾಕೋ ನನಗೆ ಬೈಯ್ಯುತ್ತೀಯಾ ಜಗಳ ತೆಗೆದು, ತಲೆಗೆ ಕಲ್ಲಿನಿಂದ ಹೊಡೆದು, 15 ಸಾವಿರ ರೂ. ನಗದು, 1 ಮೊಬೈಲ್ ಹಾಗೂ ಬೈಕ್ ಕೀ ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಾಯಾಳು ದೂರು ನೀಡಿದ್ದರು.
ಡಿವೈಎಸ್ಪಿ ತಾಮ್ರಧ್ವಜ ನೇತೃತ್ವದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದ ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss