ಹೊಸ ದಿಗಂತ ವರದಿ, ಧಾರವಾಡ:
ರಸ್ತೆಯ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಮೃತಪಟ್ಟ ಘಟನೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬಳಿ ಭಾನುವಾರ ನಡೆದಿದೆ. ಸುರೇಶ ಮೃತಪಟ್ಟ ಬೈಕ್ ಸವಾರ.
ಬೆಳಗಾವಿಯಿಂದ ಧಾರವಾಡ ಕಡೆಗೆ ಬೈಕ್ನಲ್ಲಿ ಸ್ನೇಹಿತ ಜತೆಗೆ ಬರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುರೇಶ ಹಾಗೂ ಬಸವರಾಜ ಗಂಭೀರ ಗಾಯಗೊಂಡಿದ್ದರು.
ತಕ್ಷಣವೇ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸಿದೆ ಸುರೇಶ ಮೃತಪಟ್ಟಿದ್ದಾನೆ. ಬಸವರಾಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.