Monday, August 8, 2022

Latest Posts

ತಟ್ಟಕೆರೆ ಹಾಡಿಗೆ ಕೊನೆಗೂ ಬಂತು ಬೆಳಕಿನ ಭಾಗ್ಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಮಡಿಕೇರಿ:

‘ಮನೆಗೊಂದು ದೀಪ’ ಯೋಜನೆಗೆ ಬೆಂಗಳೂರು ಬೆಳಕು ಫೌಂಡೇಷನ್ ಬಾಳೆಲೆ ತಟ್ಟಕೆರೆ ಹಾಡಿಯಲ್ಲಿ ಚಾಲನೆ ನೀಡಿತು.
ಕೊಡಗು ಜಿಲ್ಲೆಯ ವಿವಿಧ ಹಾಡಿಗಳಿಗೆ ವನವಾಸಿ ಕಲ್ಯಾಣ ಸಂಸ್ಥೆ ಮೂಲಕ 500 ಸೋಲಾರ್ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸುವ ಗುರಿ ಹೊಂದಲಾಗಿದೆ. ಪ್ರತಿ ಕುಟುಂಬಕ್ಕೆ ಎರಡು ಬಲ್ಬುಗಳು, ಒಂದು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಹೊಂದಿರುವ 7 ಸಾವಿರ ರೂ. ಮೊತ್ತದ ಉಪಕರಣಗಳನ್ನು ನೀಡಲಾಗುತ್ತಿದೆ.
ಬೆಳಕು ಫೌಂಡೇಷನ್ ಸಂಸ್ಥಾಪಕಿ ಪ್ರತಿಮಾ ಅವರು ತಟ್ಟಕೆರೆ ಗಿರಿಜನ ಹಾಡಿಯಲ್ಲಿ ಯೋಜನೆಗೆ ಚಾಲನೆ ನೀಡಿದರು. ಗಿರಿಜನ ವಿದ್ಯಾರ್ಥಿಗಳು ಬೆಳಕಿನ ಯೋಜನೆಯ ಸದುಪಯೋಗ ಪಡೆದು ಶೈಕ್ಷಣಿಕ ಸಾಧನೆಯ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಕರೆ ನೀಡಿದರು.
ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಮಾತನಾಡಿ, ಬೆಂಗಳೂರು ನಗರದ ಉದ್ಯೋಗಿಗಳು ವನವಾಸಿ ಕಲ್ಯಾಣ ಸಂಘಟನೆಗಳ ಮೂಲಕ ವಾರಾಂತ್ಯದ ರಜೆಯನ್ನು ಸೇವೆಗೆ ಮೀಸಲಿಟ್ಟು ನೆರವಾಗುತ್ತಿರುವುದು ಶ್ಲಾಘನೀಯ. ಈ ಕಾರ್ಯ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಪೂರಕವಾಗಿದೆ ಎಂದರು.
ತಟ್ಟಕೆರೆ ಹಾಡಿಯ 43 ಫಲಾನುಭವಿಗಳಿಗೆ ಮತ್ತು ಕೊಲ್ಲಿಹಾಡಿಯ 11 ಪಲಾನುಭವಿಗಳ ಮನೆಗೆ ಸೋಲಾರ್ ವ್ಯವಸ್ಥೆ ಅಳವಡಿಸಲಾಯಿತು. ಬೆಳಕು ಫೌಂಡೇಷನ್ ನಿರ್ದೇಶಕ ನವೀನ್ ಕುಮಾರ್, ವನವಾಸಿ ಕಲ್ಯಾಣ ಸಂಸ್ಥೆಯ ಪಡಿಞಾರಂಡ ಪ್ರಭುಕುಮಾರ್, ನಿಟ್ಟೂರು ಪಂಚಾಯಿತಿ ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ, ಪಂಚಾಯತಿ ಕಾರ್ಯದರ್ಶಿ ತಿರ್ನೇಲಿಮಾಡ ಪೂಣಚ್ಚ, ಜೇನು ಕುರುಬರ ಸಾಸು, ಪ್ರಮುಖರಾದ ಕಾಟಿಮಾಡ ಕುಟ್ಟಪ್ಪ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss