ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ತೌಕ್ತೆ ಚಂಡಮಾರುತದ ಅಬ್ಬರ ಹೆಚ್ಚಾಗುತ್ತಿದ್ದು, ಇಂದು ರಾತ್ರಿ 11 ಗಂಟೆಯೊಳಗೆ ಪೂರ್ವ ದಿಯುದಲ್ಲಿರುವ ಪೋರ್ಬಂದರ್ ಮತ್ತು ಮಹುವಾ ನಡುವೆ ಗುಜರಾತ್ ಕರಾವಳಿಯನ್ನು ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯ ವೇಗ ತಾಸಿಗೆ 155ರಿಂದ-165 ಕಿಮೀ ಇರಲಿದೆ ಎಂದೂ ಅಂದಾಜಿಸಿದ್ದು, ಗುಜರಾತ್ನ ಅಹ್ಮದಾಬಾದ್ನಲ್ಲಿ ಈಗಾಗಲೇ ಚಂಡಮಾರುತದ ಪ್ರಭಾವದಿಂದ ಅತಿಯಾದ ಮಳೆ ಶುರುವಾಗಿದೆ. ಇಲ್ಲಿನ ಏರ್ಪೋರ್ಟ್ ನಾಳೆ ಮುಂಜಾನೆ 5ಗಂಟೆವರೆಗೂ ಮುಚ್ಚಿರಲಿದೆ.
ತೌಕ್ತೆ ಚಂಡಮಾರುತ ಗುಜರಾತ್ ತಲುಪುವ ಮತ್ತು ವಿನಾಶದ ಬೆದರಿಕೆಗೆ ಮುಂಚಿತವಾಗಿ ಕನಿಷ್ಠ 1 , 50,000 ಜನರನ್ನು ಸೋಮವಾರ ತಮ್ಮ ಮನೆಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಭೂಕುಸಿತಕ್ಕೆ ಮುಂಚಿತವಾಗಿ ಬಂದರುಗಳು ಮತ್ತು ಮುಖ್ಯ ವಿಮಾನ ನಿಲ್ದಾಣವನ್ನ ಮುಚ್ಚಲಾಗಿದೆ.
ಮುಂಬೈನಲ್ಲಿ ತೌಕ್ತೆ ಅಬ್ಬರ
ಇನ್ನು ಮುಂಬೈನಲ್ಲಿ ಸಹ ತೌಕ್ತೆ ಅಬ್ಬರ ಹೆಚ್ಚಿದ್ದು, ಇಂದು ರಾತ್ರಿ 10ಗಂಟೆವರೆಗೂ ಏರ್ಪೋರ್ಟ್ ಬಂದ್ ಇರಲಿದೆ. ಈ ಚಂಡಮಾರುತಕ್ಕೆ ಮಹಾರಾಷ್ಟ್ರದಲ್ಲಿ ಈಗಾಗಲೇ 6ಮಂದಿ ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ. ತೌಕ್ತೆ ಚಂಡಮಾರುತಕ್ಕೀಡಾದ ರಾಜ್ಯಗಳಲ್ಲಿ ಜಾಸ್ತಿ ಅಪಾಯವಿದ್ದ ಕಡೆ ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ, ಗುಜರಾತ್, ಗೋವಾ, ದಮನ್ ಮತ್ತು ದಿಯು-ದಮನ್ಗಳ ಲೆಫ್ಟಿನೆಂಟ್ ಗವರ್ನರ್ ಜತೆ ತೌಕ್ತೆ ಚಂಡಮಾರುತದಿಂದಾಗುವ ಹಾನಿ ನಿರ್ವಹಣೆಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.