Thursday, August 11, 2022

Latest Posts

ಶ್ರೀಲಂಕಾ ಹಾಡಿಗೆ ರ್‍ಯಾಪ್ ಟಚ್ ನೀಡಿದ ಮಂಗಳೂರಿನ ಹುಡುಗಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಮಂಗಳೂರು:

ಶ್ರೀಲಂಕಾದಲ್ಲಿ ಜನಪ್ರಿಯವಾಗಿರುವ ಶ್ರೀಲಂಕಾ ಭಾಷೆಯ ‘ಮನಿಕೆ ಮಗೆ ಹಿತೆ’ ಹಾಡಿಗೆ ಮೂಡಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ ಅಸೀಮಾ ದೋಳ ಅವರು ರ್‍ಯಾಪ್ ಟಚ್ ನೀಡಿದ್ದು, ಅದೀಗ ಶ್ರೀಲಂಕಾ ಸೇರಿದಂತೆ ಎಲ್ಲೆಡೆ ಭಾರೀ ಮನ್ನಣೆ ಪಡೆದುಕೊಂಡಿದೆ.
ಅಸೀಮಾ ದೋಳ ಅಫೀಶಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಸೆ.3ರಂದು ಈ ರ್‍ಯಾಪ್ ಹಾಡನ್ನು ಅಪ್‌ಲೋಡ್ ಮಾಡಿದ್ದಾರೆ. ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಹಾಡು ಭಾರೀ ವೈರಲ್ ಆಗಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದರ ಒರಿಜಿನಲ್ ಕವರ್ ಹಾಡನ್ನು ಯೊಹಾನಿ ಹಾಗೂ ಸತೀಶನ್ ಹಾಡಿದ್ದು, 80 ಮಿಲಿಯನ್
ಮಂದಿ ವೀಕ್ಷಿಸಿದ್ದರು. ಇದೀಗ ಅಸೀಮಾ ದೋಳ ಅದೇ ಹಾಡನ್ನು ರ್‍ಯಾಪ್‌ನಲ್ಲಿ ಹಾಡುವ ಮೂಲಕ ಶ್ರೀಲಂಕಾದಲ್ಲಿ ಹಿಟ್ ಆಗಿದ್ದು, ದಿಢೀರ್ ಬೇಡಿಕೆಯ ಹಾಡುಗಾರ್ತಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss