ರಾಜ್ಯಕ್ಕೂ ಕೊರೋನಾ ನಾಲ್ಕನೇ ಅಲೆ ಎಂಟ್ರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯಕ್ಕೆ ಮತ್ತೆ ಕೊರೋನಾ ಆಗಮನದ ಮುನ್ಸೂಚನೆಗಳು ಸಿಕ್ಕಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಹೊಸ ರೂಪಾಂತರಿ ವೈರಸ್‌ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಬಿಎ.10, ಬಿಎ.2, 12 ಹೊಸ ವೈರಸ್‌ ಪತ್ತೆಯಾಗಿದೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್‌ ಮಂಜುನಾಥ್‌ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಡಾ.ಸಿ.ಎನ್‌ ಮಂಜುನಾಥ್‌, ಬೆಂಗಳೂರಿನಲ್ಲಿ ಬಿಎ.10, ಬಿಎ.2, 12 ಹೊಸ ರೂಪಾಂತರಿ ವೈರಸ್‌ ಪತ್ತೆಯಾಗಿದೆ.ಇವುಗಳು ದೆಹಲಿ, ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಇನ್ನು ಭಾರತದಲ್ಲಿ ಈಗಾಗಲೇ ಕೊರೋನಾ 4ನೇ ಅಲೆ ಆರಂಭವಾಗಿದೆ. ಇನ್ನು ಕರ್ನಾಟಕದಲ್ಲಿ 3-4 ವಾರಗಳಲ್ಲಿ 4ನೇ ಅಲೆ ಬರುವ ಸಾಧ್ಯತೆಯಿದೆ ಎಂದರು.
ಕೊರೋನಾ’ಕೊರೊನಾ 4ನೇ ಅಲೆ 3ನೇ ಅಲೆಯ ಗುಣಲಕ್ಷಣಗಳನ್ನ ಹೊಂದಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುತ್ತದೆ. ರಾಜ್ಯದಲ್ಲಿ ಈಗಾಗಲೇ ಎಲ್ಲ ಚಟುವಟಿಕೆಗಳು ಆರಂಭವಾಗಿದೆ. ಇನ್ನೆರೆಡು ವಾರದಲ್ಲಿ ಕೇಸ್‌ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.
ಮುಖ್ಯವಾಗಿ ಶ್ವಾಸಕೋಶ, ಹೃದ್ರೋಗ, ಕ್ಯಾನ್ಸರ್‌ನಿಂದ ಬಳಲುವವರು ಹುಷಾರಾಗಿರಿ. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಇನ್ನು ಜ್ವರ, ಕೆಮ್ಮು ಇದ್ದರೆ ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ. ಲಸಿಕೆ ಪಡೆದಿದ್ದೇವೆಂದು ನಿರ್ಲಕ್ಷ್ಯ ಮಾಡುವುದು ಬೇಡಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!