Wednesday, June 29, 2022

Latest Posts

ದಿನಭವಿಷ್ಯ: ಈ ರಾಶಿಯವರು ಇಂದು ಯಾರ ವಿರೋಧ ಕಟ್ಟಿಕೊಳ್ಳದೇ ಇರುವುದು ಒಳಿತು…

ಸೋಮವಾರ, 23 ಆಗಸ್ಟ್ 2021

ಮೇಷ
ಪ್ರವಾಹದ ಜತೆಗೇ ಸಾಗುವುದು ಜಾಣತನ. ಯಾರನ್ನೂ ವಿರೋಧ ಕಟ್ಟಿಕೊಳ್ಳಬೇಡಿ. ಸಂಬಂಧ ಹಾಳು ಮಾಡಲು ಅವಕಾಶ ಕೊಡಬೇಡಿ.

ವೃಷಭ
ನಿಮ್ಮ ಇಚ್ಛೆಗೆ ವಿರುದ್ಧ ವಾಗಿ ನಡಕೊಳ್ಳ ಬೇಕಾಗುತ್ತದೆ. ಕೆಲವರ ವರ್ತನೆ ನಿಮಗೆ ಭ್ರಮನಿರಶನ ಸೃಷ್ಟಿಸುತ್ತದೆ. ಆರ್ಥಿಕ ಹಿನ್ನಡೆ.

ಮಿಥುನ
ಕುಟುಂಬ ಸದಸ್ಯರನ್ನು ಕಾಡುತ್ತಿರುವ ಸಮಸ್ಯೆಯನ್ನು ಕಡೆಗಣಿಸಿದ್ದೀರಿ. ಆ ಬಗ್ಗೆ  ಗಮನ ಕೊಡಿ. ವೃತ್ತಿಯಲ್ಲಿ  ಆರ್ಥಿಕ ಏರುಪೇರು  ಸಂಭವ.

ಕಟಕ
ಎಲ್ಲದಕ್ಕೂ ಅತಿರೇಕದಿಂದ ಪ್ರತಿಕ್ರಿಯಿಸುವುದೇ ನಿಮ್ಮ ಸಮಸ್ಯೆ. ಭಾವನೆಯನ್ನು ನಿಯಂತ್ರಿಸಬೇಕು. ಸಾವಧಾನವಿರಲಿ.

ಸಿಂಹ
ಇಂದು ನಿಮ್ಮ ದಿನ. ಸಾಧಾರಣವಾಗಿ ನಿಮ್ಮ ಮಾತು ಕೇಳದವರೂ ಇಂದು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ಉದ್ಯೋಗದಲ್ಲಿ ಯಶಸ್ಸು .

ಕನ್ಯಾ
ಮನಸ್ಸಿನಲ್ಲೇನೋ ಆತಂಕ. ಯಾವುದೋ ವಿಷಯ ಕೊರೆಯು ತ್ತದೆ. ಅದನ್ನು ಎದುರಿಸದೆ ಓಡಿ ಹೋಗುವ ಬದಲು, ಪರಿಹರಿಸಲು ಯತ್ನಿಸಿ.

ತುಲಾ
ಕಷ್ಟಪಟ್ಟರಷ್ಟೇ ಲಾಭ. ಇದನ್ನು ನೀವು ಅರಿತುಕೊಳ್ಳಬೇಕು. ಶ್ರಮ ಪಡದೆ ನಿಮಗೆ ಉತ್ತಮ ಫಲ ದೊರಕದು. ಸೂಕ್ತ ನೆರವು ದೊರಕಲಿದೆ.

ವೃಶ್ಚಿಕ
ನಿರಾಶೆಯ , ಉತ್ಸಾಹರಹಿತ ದಿನ. ಉದ್ಯೋಗದಲ್ಲಿ ಹಿನ್ನಡೆ ಅನುಭವಿಸುವಿರಿ. ಹೆಚ್ಚು ಹಣ ಖರ್ಚಾಗಬಹುದು. ಕೌಟುಂಬಿಕ ಒತ್ತಡಗಳು ಹೆಚ್ಚುತ್ತವೆ.
ಧನು
ಯಾವುದೇ ಕೆಲಸ ಇಂದು ಬಾಕಿ ಉಳಿಸದಿರಿ. ಉಳಿಸಿದರೆ ಅದು ನಿಮ್ಮ ದಿನವನ್ನು ಹಾಳು ಮಾಡಬಹುದು.ಕೌಟುಂಬಿಕ ಪರಿಸರ ಅನನುಕೂಲಕರ.

ಮಕರ
ಕೆಲಸಮಯಗಳಿಂದ ಕಾದಿದ್ದ ಶುಭ ಸುದ್ದಿ ಇಂದು ದೊರಕ ಬಹುದು. ವೃತ್ತಿಯಲ್ಲಿ ಯಶ, ಆರ್ಥಿಕ ಲಾಭ. ಸಾಂಸಾರಿಕ ಸಮಸ್ಯೆಗಳು ಪರಿಹಾರ ಕಾಣುತ್ತವೆ.

ಕುಂಭ
ಸಂತೋಷಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಬಹುದು. ಮಾನಸಿಕ ಒತ್ತಡ ನಿವಾರಣೆ. ಕಷ್ಟವೆಂದುಕೊಂಡ ಕೆಲಸ ಸುಲಭದಲ್ಲಿ ಮುಗಿಯಲಿದೆ.

ಮೀನ
ಖಾಸಗಿ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಸಮತೋಲನ ಸಾಧಿಸಬೇಕು. ಇಲ್ಲದಿ
ದ್ದರೆ ಬಿಕ್ಕಟ್ಟು ಎದುರಿಸುವಿರಿ. ಎರಡನ್ನೂ ಕಡೆಗಣಿಸಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss