ದಿನಭವಿಷ್ಯ | ಹೊಸ ಕಾರ್ಯ ಅಥವಾ ವ್ಯವಹಾರ ಆರಂಭಿಸುವ ಮುನ್ನ ಯೋಚಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಅನಿರೀಕ್ಷಿತ ಸಮಸ್ಯೆಗಳು ಎದುರಾಗುವವು. ಒಮ್ಮೆ ನೀವು ಅಧೀರರಾದರೂ ಬಳಿಕ ಅದನ್ನು ನಿಭಾಯಿಸಲು ಶಕ್ತರಾಗುವಿರಿ. ಸೂಕ್ತ ನೆರವೂ ಲಭ್ಯ.

ವೃಷಭ
ನಿಮ್ಮ ಜೀವನಶೈಲಿಯಲ್ಲಿ ಮಾಡುವ ಕೆಲವು ಬದಲಾವಣೆ ಉತ್ತಮ ಫಲ ನೀಡಬಲ್ಲವು. ಅಂತಹ ಬದಲಾವಣೆ  ಮಾಡಲು ಇಂದು ಸಕಾಲವಾಗಿದೆ.

ಮಿಥುನ
ವೃತ್ತಿ ಮತ್ತು ಖಾಸಗಿ ಬದುಕು ಎರಡಲ್ಲೂ ನಿಮಗೆ ಪೂರಕವಾದ ಬೆಳವಣಿಗೆ. ಇದರಿಂದ ಮನಸ್ಸಿಗೆ ಶಾಂತಿ. ಆರೋಗ್ಯ ಸಮಸ್ಯೆ ಪರಿಹಾರ ಕಾಣುವುದು.

ಕಟಕ
ಹೊಸ ಕಾರ್ಯ ಅಥವಾ ವ್ಯವಹಾರ ಆರಂಭಿಸುವ ಮುನ್ನ ಬಾರಿ ಯೋಚಿಸಿ. ನಿಮಗೆ ಪೂರಕವಲ್ಲದ ಸನ್ನಿವೇಶ ಉಂಟಾದೀತು. ಯಾವುದಕ್ಕೂ ಸಿದ್ಧರಾಗಿರಿ.

ಸಿಂಹ
ಕುಟುಂಬದಲ್ಲಿ ವಾಗ್ವಾದ, ಸಂಘರ್ಷ ಉಂಟಾದೀತು. ಭಿನ್ನಾಭಿಪ್ರಾಯಗಳು ಇದಕ್ಕೆ ಕಾರಣ. ಸಹನೆಯಿಂದ ವರ್ತಿಸುವುದು ಒಳಿತು.

ಕನ್ಯಾ
ನಿಮ್ಮ ಕಾರ್ಯ ಎಲ್ಲರ ಮೆಚ್ಚುಗೆ ಗಳಿಸುವುದು. ಕೆಲವರ ಅಸೂಯೆಗೂ ಕಾರಣರಾಗುವಿರಿ. ಖಾಸಗಿ ಬದುಕಿನಲ್ಲಿ ಕೆಲವು ಅಪಸ್ವರ ಕೇಳಿಬರಬಹುದು.

ತುಲಾ
ಆರೋಗ್ಯದತ್ತ ಗಮನ ಕೊಡಿ. ಮುಖ್ಯವಾಗಿ ಕಾಲಕಾಲಕ್ಕೆ ಆಹಾರ ಸೇವಿಸಿರಿ. ಬಂಧುಗಳಿಂದ ಕಿರಿಕಿರಿ. ಕೆಲವರ ವರ್ತನೆ  ಅಸಹನೀಯ ಎನಿಸುವುದು.

ವೃಶ್ಚಿಕ
ಉತ್ಸಾಹದ ದಿನ. ಕಾರ್ಯದಲ್ಲಿ ಸಫಲತೆ. ಕಠಿಣ ಕೆಲಸವೂ ಸುಲಭದಲ್ಲಿ ಮುಗಿವುದು. ವಿರೋಧ ಗಳನ್ನು ಸಮರ್ಥವಾಗಿ ನಿಭಾಯಿಸುವಿರಿ.

ಧನು
ಕೆಲವು ಸಂಬಂಧವನ್ನು ಪರಾಮರ್ಶೆಗೆ ಒಡ್ಡಬೇಕು. ಕೆಲವರು ನಿಮಗೆ ಹೊರೆಯಾಗುತ್ತಿದ್ದರೆ ಅವರನ್ನು ದೂರ ಸರಿಸಿರಿ.

ಮಕರ
ಪ್ರಮುಖ ನಿರ್ಧಾರ ತಾಳುವಾಗ ಶಾಂತಿ ಯಿಂದ ಆಲೋಚಿಸಿರಿ. ಅವಸರದ ನಿರ್ಧಾರ ಹಾನಿ ತಂದೀತು. ಇತರರ ಸಹಕಾರ ನಿಮಗೆ ಸಿಗಲಾರದು.

ಕುಂಭ
ದೇಹಾಲಾಸ್ಯ ಕಾಡಬಹುದು. ಮನಸ್ಸಿ ನಲ್ಲೂ ಕೆಲವು ಕಿರಿಕಿರಿ ಬಾಧಿಸುವುದು. ಯಾವುದೇ ಕಾರ್ಯ ಸಕಾಲದಲ್ಲಿ ಮುಗಿಯದು.

ಮೀನ
ಆಪ್ತರ ಅನಾರೋಗಯ ಮನಸ್ಸಿಗೆ ನೋವು ತರುತ್ತದೆ. ಚಿಂತೆ ಬೇಡ, ಎಲ್ಲವೂ ಬೇಗನೆ ಸರಿಯಾಗುವುದು. ಆರ್ಥಿಕ ಸಮಸ್ಯೆ ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!