Wednesday, June 29, 2022

Latest Posts

ದಿನ ಭವಿಷ್ಯ| ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ, ತಾಳ್ಮೆ ಕಾಯ್ದುಕೊಳ್ಳಿ…

ದಿನಭವಿಷ್ಯ

ಮೇಷ
ಕೈಗೊಂಡ ಕಾರ್ಯ ಸಫಲವಾಗುವುದು. ಅಡ್ಡಿಗಳು ನಿವಾರಣೆ. ಹಣದ ಕೊರತೆ ಕಾಡಿದರೂ ಅದನ್ನು ನಿಭಾಯಿಸುವಿರಿ. ಕೌಟುಂಬಿಕ ನೆಮ್ಮದಿ.

ವೃಷಭ
ನಿಮ್ಮ ಕೆಲಸಕ್ಕೆ ನೀವು ಒಳ್ಳೆ ಹೆಸರು ಪಡೆಯುವಿರಿ. ಅದಕ್ಕೆ ಕಾರಣ ಕೆಲಸದಲ್ಲಿ ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆ. ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ.

ಮಿಥುನ
ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ  ಹೊಂದಾಣಿಕೆ ಸಾಸಿ. ಯಾವುದೋ ಒಂದಕ್ಕೆ ಆದ್ಯತೆ ನೀಡಿ ಮತ್ತೊಂದು ಕಡೆಗಣಿಸುವುದು ಸರಿಯಲ್ಲ.

ಕಟಕ
ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಕೆಲವರ ಅಸಹಕಾರವನ್ನೂ ಎದುರಿಸುವಿರಿ. ಸಣ್ಣ ಮಟ್ಟಿನ ಸಂಘರ್ಷ ನಡೆದೀತು. ತಾಳ್ಮೆ ಕಾಯ್ದುಕೊಳ್ಳಿ.

ಸಿಂಹ
ಇಂದು ಕೆಲವು ಕೆಲಸ ಗಳನ್ನು ಪೂರೈಸಬೇಕಾದ ಒತ್ತಡಕ್ಕೆ ಸಿಲುಕುವಿರಿ. ಆದರೆ ಅವನ್ನೆಲ್ಲ  ಸಫಲವಾಗಿ  ಮಾಡಲೂ ಶಕ್ತರಾಗುವಿರಿ. ಸೂಕ್ತ ನೆರವೂ ಲಭ್ಯ.

ಕನ್ಯಾ
ನಿಮಗಿಂದು ನಿರಾಳ ದಿನ. ಒತ್ತಡಗಳು ಕಾಡುವುದಿಲ್ಲ. ಕೆಲಸವನ್ನು ಮುಗಿಸಿದ ತೃಪ್ತಿ. ಮನೆಯಲ್ಲಿ ಎಲ್ಲವೂ ಹಿತಕರ, ಸೌಹಾರ್ದಕರ.

ತುಲಾ
ಪ್ರಾಮಾಣಿಕತೆಯಿಂದ ನಿಮ್ಮ ಕೆಲಸ ನಿರ್ವಹಿಸಿ. ಸೂಕ್ತ ಫಲ ಸಿಕ್ಕಿಯೇ ಸಿಗುವುದು. ಇತರರ ಜತೆ ನಿಮ್ಮ ಸ್ಥಾನಮಾನ ಹೋಲಿಕೆ ಮಾಡದಿರಿ.  ಅನುಕರಣೆ ಬೇಡ.

ವೃಶ್ಚಿಕ
ವೃತ್ತಿಯಲ್ಲಿ ಎಲ್ಲರ ವಿಶ್ವಾಸ ಗಳಿಸುವಿರಿ. ಇದರಿಂದ ನಿಮ್ಮ ಕೆಲಸಕ್ಕೆ ಮಾನ್ಯತೆ ದೊರಕುವುದು. ನಿಮಗೆ ನೆರವು ನೀಡಿದವರ ಕುರಿತು ಕೃತಜ್ಞತೆಯಿರಲಿ.

ಧನು
ಸೂಕ್ಷ್ಮಸಂವೇದಿಯಾಗಿ ವರ್ತಿಸುವಿರಿ. ಉದ್ವಿಗ್ನತೆ, ಆತಂಕ ಕಾಡಬಹುದು.ಕೆಲವು ವಿಷಯಗಳು ನೀವು ಬಯಸಿದಂತೆ ಸಾಗುವುದಿಲ್ಲ.

ಮಕರ
ಚಿಂತೆಗಳನ್ನೆಲ್ಲ ಮರೆತು ನೆಮ್ಮದಿಯಾಗಿ ಕಳೆಯಬೇಕೆಂದಿದ್ದರೆ ಈ ದಿನ ನಿಮಗೆ ಸುದಿನ. ಪ್ರವಾಸ ಹೊರಡಲೂ ಕಾಲ ಸೂಕ್ತವಾಗಿದೆ. ಖರ್ಚು ಹೆಚ್ಚಬಹುದು.

ಕುಂಭ
ತುಸು ಆರೋಗ್ಯ ಸಮಸ್ಯೆ ಕಾಡಬಹುದು. ಹಾಗೆಂದು ಗಾಬರಿ ಪಡುವ ಅಗತ್ಯ ಬೀಳಲಾರದು. ಮನೆಯಲ್ಲಿ ಸೌಹಾರ್ದ ವಾತಾವರಣ.

ಮೀನ
ನಿಮ್ಮ ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿ. ತಪ್ಪುಗಳು ಸಂಭವಿಸಬಹುದು.ಇತರರ ಮಾತಿಗೆ ಆಹಾರವಾಗುವಿರಿ. ತಾಳ್ಮೆ ಕಾಯ್ದುಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss