ಐಎನ್‌ಎಸ್ ವಿಕ್ರಾಂತ್ ದೇಶಕ್ಕೆ ಹೆಮ್ಮೆಯ ಪ್ರತೀಕ, ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಎನ್‌ಎಸ್ ವಿಕ್ರಾಂತ್ ನೌಕಾಪಡೆಗೆ ಹೊಸದಾಗಿ ಸೇರ್ಪಡೆಗೊಂಡಿದೆ. ಬಳಿಕ ಮತನಾಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ಭಾರತೀಯನೂ ಐಎನ್‌ಎಸ್ ವಿಕ್ರಾಂತ್ ಬಗ್ಗೆ ಹೆಮ್ಮೆ ಪಡಬೇಕು. ಈ ಹಡಗು ವಿಶ್ವ ಭೂಪಟದಲ್ಲಿ ಭಾರತವನ್ನು ಉತ್ತಮ ಸ್ಥಾನದಲ್ಲಿರಿಸಲಿದೆ. ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ಐಎನ್‌ಎಸ್ ವಿಕ್ರಾಂತ್ ನನಸು ಮಾಡಲಿದೆ ಎಂದರು.

ಈ ಹಡಗು ಭಾರತದ ಪ್ರಯತ್ನದ ಕೃಷಿಗೆ ಸಾಕ್ಷಿಯಾಗಿ ನಿಲ್ಲಲಿದೆ ನಮ್ಮ ದೇಶ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು. ತಮ್ಮದೇ ಆದ ವಾಹಕವನ್ನು ಅಭಿವೃದ್ಧಿಪಡಿಸಿದ ದೇಶಗಳ ಸರಿಸಮನಾಗಿ ನಾವು ಇಂದುನಿಂತಿದ್ದೇವೆ. ಐಎನ್ಎಸ್ ವಿಕ್ರಾಂತ್ ಮೂಲಕ ದೇಶಕ್ಕೆ ಹೊಸ ಭರವಸೆ ಮೂಡಿದೆ ಇದರ ನಿರ್ಮಾಣದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಇಂದು ಕೇರಳದ ಕರಾವಳಿಯಲ್ಲಿ ಇಂದು ನವಶಕೆ ಶುರುವಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ವದೇಶಿ ಜ್ಞಾನದಿಂದ ವಿನ್ಯಾಸಗೊಂಡಿರುವ ಈ ಹಡಗು ನಮ್ಮ ದೇಶದ ಶಕ್ತಿಯ ಐಕಾನ್ ಆಗಿ ನಿಲ್ಲಲಿದೆ ಎಂದರು. 1971 ರ ಯುದ್ಧದ ಸಮಯದಲ್ಲಿ, ವಿಕ್ರಾಂತ್ ನೌಕಾ ಪ್ರಮುಖ ಪಾತ್ರ ವಹಿಸಿತ್ತು. ಐಎನ್‌ಎಸ್ ವಿಕ್ರಾಂತ್‌ನ ಆಧುನಿಕ ಆವೃತ್ತಿಯಾಗಿದೆ. ಯುದ್ಧನೌಕೆಗೆ ಭಾರತದ ಮೊದಲ ವಿಮಾನವಾಹಕ ನೌಕೆ INS-ವಿಕ್ರಾಂತ್ (1971)ನ ಹೆಸರಿಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!