ಇಂದು ʼಪೂಚಂತೇʼ ಜನ್ಮದಿನ: ನೀವು ಜೀವನದಲ್ಲಿ ಒಮ್ಮೆಯಾದರೂ ಓದಲೇ ಬೇಕಾದ ಅವರ ಪುಸ್ತಕಗಳ ಲಿಸ್ಟ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮ್ಮ ಸರಳ ಬರವಣಿಗೆಯ ಮೂಲಕ ಅತ್ಯಂತ ಕ್ಲಿಷ್ಟ ವಿಚಾರಗಳನ್ನು ವಿವರಿಸುತ್ತಿದ್ದ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಬರಗಾರರಲ್ಲಿ ಒಬ್ಬರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನವಿಂದು. ಹೇಳಬೇಕಾದುದನ್ನು ಅರ್ಥಪೂರ್ಣವಾಗಿ ತಮ್ಮ ಕಥೆಗಳಲ್ಲಿ ಅಡಗಿಸಿಡುವ ವಿಶಿಷ್ಟ ಕಲೆ ಅವರಿಗಿತ್ತು. 1938ರ ಸೆಪ್ಟೆಂಬರ್‌ 8 ರಂದು ಕುಪ್ಪಳ್ಳಿಯಲ್ಲಿ ಜನಿಸಿದ ಅವರು ಒಬ್ಬ ಕಥೆಗಾರರಾಗಿ, ಛಾಯಾಚಿತ್ರಗ್ರಾಹಕರಾಗಿ, ಪರಿಸರವಾದಿಯಾಗಿ, ಅಂಕಣಕಾರರಾಗಿ, ಬರಹಗಾರರಾಗಿ ನಡಿನಲ್ಲಿ ತಮ್ಮದೇ ಛಾಪು ಮೂಡಿಸಿದವರು.
ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು ಎನ್ನಲಾಗುತ್ತದೆ. ʼಲಿಂಗಬಂದʼ ಎಂಬುದು ಇವರ ಮೊದಲ ಕಥೆ, ಆನಂತರ ತಮ್ಮ ಸುಂದರ ಕಥೆಗಳಿಂದಲೇ ಓದುಗರ ಮನದಲ್ಲಿ ತಮ್ಮ ಛಾಪು ಮೂಡಿಸಿದವರಿವರು. ಕಾದಂಬರಿ, ಕತೆ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳು ಇವರ ಲೇಖನಿಯಿಂದ ಹೊರಬಿದ್ದಿವೆ. ಹಲವಾರು ಆಂಗ್ಲ ಕೃತಿಗಳನ್ನೂ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.ವಿಜ್ಞಾನ ವಿಸ್ಮಯದಂತಹ ಬರಹಗಳೂ ಇವರ ಕೈಯಿಂದ ಹೊರಬಂದಿವೆ. ಅವರ ಜನುಮ ದಿನವಾದ ಇಂದು ನೀವು ಓದಲೇ ಬೇಕಾದ ಅವರ ಕೆಲ ಕೃತಿಗಳ ಹೆಸರುಗಳು ಇಲ್ಲಿವೆ.

ಪ್ಯಾಪಿಲಾನ್-3‌ಭಾಗ

ಕಾದಂಬರಿಗಳು
ಕರ್ವಾಲೋ, ಜುಗಾರಿಕ್ರಾಸ್‌, ಚಿದಂಬರ ರಹಸ್ಯ, ಕಾಡು ಮತ್ತು ಕ್ರೌರ್ಯ

ಕಥಾಸಂಕಲನ
ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಹುಲಿಯೂರಿನ ಸರಹದ್ದು

ಪರಿಸರ ಸಂಬಂಧಿ ಕೃತಿಗಳು
ವಿಸ್ಮಯ (3ಸರಣಿ), ಪ್ಲೈಯಿಂಗ್‌ ಸಾಸರ್‌, ಪರಿಸರದ ಕತೆ, ಮಿಂಚುಳ್ಳಿ, ಏರೋಪ್ಲೇನ್‌ ಚಿಟ್ಟೆ ಮತ್ತು ಇತರ ಕಥೆಗಳು

ಮಿಲೇನಿಯಮ್‌ ಸರಣಿಯ 16 ಪುಸ್ತಕಗಳು ಹಾಗೂ ಪೆದ್ದಚೆರುವಿನ ರಾಕ್ಷಸ, ಬೆಳ್ಳಂದೂರಿನ ನರಭಕ್ಷಕ, ಮಹಾಪಲಾಯನ ಮುಂತಾದ ಅನುವಾದಿತ ಕೃತಿಗಳು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!